ಮಳೆಗಾಲದಲ್ಲಿ ಮಳೆಯ ಶಬ್ದ ಹೃದಯ ಬಡಿತದಷ್ಟೇ ಸ್ಥಿರವಾಗಿರುವ ಸಿರ್ಸಿಯಲ್ಲಿ
ಹುಟ್ಟಿ ಬೆಳೆದ ಮೇಲೆ ಮಳೆಯ ಬಗ್ಗೆ ಕವನವನ್ನು ಬರೆಯದಿದ್ದರೆ ಹೇಗೆ?
ಆದರೆ ಈ ಕವನ ಬರೆದಿದ್ದು "ಗ್ರೀಷ್ಮಾ" ಎನ್ನುವ ಹೆಸರಿನ ಆತ್ಮೀಯ ಗೆಳತಿಗಾಗಿ..
ಹುಟ್ಟಿ ಬೆಳೆದ ಮೇಲೆ ಮಳೆಯ ಬಗ್ಗೆ ಕವನವನ್ನು ಬರೆಯದಿದ್ದರೆ ಹೇಗೆ?
ಆದರೆ ಈ ಕವನ ಬರೆದಿದ್ದು "ಗ್ರೀಷ್ಮಾ" ಎನ್ನುವ ಹೆಸರಿನ ಆತ್ಮೀಯ ಗೆಳತಿಗಾಗಿ..
ನಿನಗಾಗಿ ಕಾಯುತ್ತಿದೆ ಭುವಿಯು,
ತನ್ನೊಡಲ ತಣಿಸಿಕೊಳ್ಳಲು;
ಹಸಿರ ಸೀರೆಯನುಟ್ಟು ಮೆರೆಯಲು.
ಕಾಯುತ್ತಿದೆ ಕೊಳದಲಿರುವ ತಾವರೆಯು,
ಹೂವಾಗಿ ಕ೦ಗೊಳಿಸಲು;
ಭುವಿಗೆ ಸಿ೦ಗಾರವಾಗಲು.
ನಿನ್ನ ಬರುವಿಕೆಯ ಎದುರು ನೋಡುತ್ತಿದೆ ನದಿಯು,
ನೀರು ತು೦ಬಿಸಿಕೊ೦ಡು ಉಕ್ಕಿ ಹರಿಯಲು;
ಹರಿದು ಸಮುದ್ರ ಸೇರಲು.
ಸದಾ ಕಾಯುತ್ತಿರುತ್ತೇನೆ ನಾನೂ
ಭುವಿ, ತಾವರೆ, ನದಿಯ೦ತೆ - ನಿನ್ನೊಲವ ಕಾಣಲು,
ನಿನ್ನ ನಿನಾದದೊಡನೆ ನನ್ನೆದೆಯ ಬಡಿತ ಸೇರಿಸಲು,
ನಿನ್ನೊಳಗೆ ನಾನು ಐಕ್ಯವಾಗಲು.
chennagidhe! :) . friendship bagge ondu bandilla...
ReplyDelete"baanalli oodo megha.. girigu ninthalle yoga".... types bariri ;)
thanks :) friendship baggenoo baratte..kayta iri..
ReplyDelete"ಮಳೆಗಾಲದಲ್ಲಿ ಮಳೆಯ ಶಬ್ದ ಹೃದಯ ಬಡಿತದಷ್ಟೇ ಸ್ಥಿರವಾಗಿರುವ" - ಸಾಲು ತುಂಬಾ ಇಷ್ಟವಾಯ್ತು.
ReplyDelete@ Chethan : Ishtapattiddakke dhanyavaadagalu :)
ReplyDeleteBlog ge swagata haagu Heege baruttiri :)