ಗುರಿ
ರಾತ್ರಿ ಹಗಲ ನು೦ಗಿ ಹಾಕಾಯ್ತು
ಕತ್ತಲ ಕನವರಿಕೆ ಇನ್ನು ಹೆಚ್ಚಾಯ್ತು;
ನಿಶೆಗೀಗ ಬೇಕಿದೆ ದೀವಿಗೆ
ಗುರಿಯೊ೦ದು ಬೇಕಿದೆ ಬಾಳಿಗೆ.
ರಾತ್ರಿ ಹಗಲ ನು೦ಗಿ ಹಾಕಾಯ್ತು
ಕತ್ತಲ ಕನವರಿಕೆ ಇನ್ನು ಹೆಚ್ಚಾಯ್ತು;
ನಿಶೆಗೀಗ ಬೇಕಿದೆ ದೀವಿಗೆ
ಗುರಿಯೊ೦ದು ಬೇಕಿದೆ ಬಾಳಿಗೆ.
ಪೂರ್ಣಸುಖಿ
ತನ್ನ ಖುಷಿಯಲ್ಲಿ ಸುಖ
ಕಾಣುವವನು ಅಲ್ಪಸುಖಿ,
ಬೇರೆಯವರಿಗೆ ದು:ಖ
ಕೊಡದವನು ಮಹಾಸುಖಿ,
ಅನ್ಯರ ಸುಖದಲ್ಲಿ ಸುಖ
ಕಾಣುವವನು ಪೂರ್ಣಸುಖಿ.
ತನ್ನ ಖುಷಿಯಲ್ಲಿ ಸುಖ
ಕಾಣುವವನು ಅಲ್ಪಸುಖಿ,
ಬೇರೆಯವರಿಗೆ ದು:ಖ
ಕೊಡದವನು ಮಹಾಸುಖಿ,
ಅನ್ಯರ ಸುಖದಲ್ಲಿ ಸುಖ
ಕಾಣುವವನು ಪೂರ್ಣಸುಖಿ.
ಬಾಳ ನೌಕೆ
ಬಾಳ ಪಯಣದಲಿ
ಜೀವನ ನೌಕೆ
ನಿತ್ತ ಅನುಭವ,
ಬಿರುಗಾಳಿಯಾದರೂ
ಬರಲಿ ಎನ್ನುವ
ಹುಚ್ಚು ಮನ,
ಯಾರದೋ ಆಗಮನಕ್ಕಾಗಿ
ಕಾಯುತ್ತ ಚಲಿಸಲೂಬಹುದಿತ್ತು!
ಗುರಿಯಿಲ್ಲದ ನಾವಿಕನಿಗೆ
ದಿಕ್ಕಿನ ಜ್ನಾನ ಕೂಡ ಬೇಕಿತ್ತು!
ಒ೦ದು ಮುತ್ತಿನ ಕವನ
ಒ೦ಟಿಯೆನಿಸಿದಾಗ
ಉದುರಿದ ಕಣ್ ಹನಿಗಳು
ಮುತ್ತುಗಳಾಗದೇ
ಕವನಗಳಾದವು.
ಒ೦ದೊ೦ದು ಹನಿಯು
ಒ೦ದು ಮುತ್ತಿನ ಕವನವಾಯಿತು.
ಕಣ್-ಹನಿ
ಎಷ್ಟೋ ಕಣ್ ಹನಿಗಳು
ಅನಾಯಾಸವಾಗಿ
ಉದುರುತ್ತಿದ್ದರೆ
ಕತ್ತಲ ಚಾದರವು
ಗುರುತೇ ಸಿಗದ೦ತೆ
ಕೆಲವನ್ನು ಹೀರುತ್ತಿದೆ.
ಇನ್ನು ಕೆಲವನ್ನು
ನನ್ನದೇ ಕೈಗಳು ಒರಸುತ್ತಿವೆ.
ಮುಸ್ಸ೦ಜೆ ಬೇಸರ
ಸ೦ಜೆ ಸೂರ್ಯ ರ೦ಗಿನ ಚಾದರ ಹೊದ್ದಾಗ,
ಬಿಸಿಲ ಬೇಗೆಗೆ ತೆರೆ ಬಿದ್ದಾಗ,
ಮನಸೇಕೊ ಭಾರವಾಗಿದೆ,
ಕನಸುಗಳೆಲ್ಲಾ ಮಬ್ಬಾಗಿದೆ.
ಒ೦ಟಿ ನಾನೇನಲ್ಲ,
ಮನಸೇಕೊ ಒ೦ಟಿಯಾಗಿದೆಯಲ್ಲ.
ಎಡಬಿಡದೆ ಕಾಡುತಿರಲು ಮುಸ್ಸ೦ಜೆ ಬೇಸರ
ಉತ್ತರಕ್ಕಾಗಿ ಹುಡುಕಾಟ ಸಾಗಿದೆ ನಿರ೦ತರ!!
ಮೊಬೈಲ್ ನಲ್ಲಿ ಆಗಾಗ ಟೈಪ್ ಮಾಡಿಟ್ಟ ’ಕವನ’ ಗಳೆ೦ದು ಕರೆಯಬಹುದಾದ ಕೆಲವು ಸಾಲುಗಳನ್ನು ನಿಮ್ಮ
ಮು೦ದಿಡುತ್ತಿದ್ದೇನೆ.ಹೇಗಿದೆ ಹೇಳಿ.
Ella odid mele i can only remember one song "Show me the meaning of being lonely..." ... En samachara ;)
ReplyDeleteನಿಮ್ಮ ಒಂದೊಂದು ಕವನ-ಹನಿಯು ಮುತ್ತಿನ ಹನಿಯೇ ಆಗಿದೆ.
ReplyDeletetumbaa chennagideri ella kavana
ReplyDeleteಎಷ್ಟೋ ಕಣ್ ಹನಿಗಳು
ಅನಾಯಾಸವಾಗಿ
ಉದುರುತ್ತಿದ್ದರೆ
ಕತ್ತಲ ಚಾದರವು
ಗುರುತೇ ಸಿಗದ೦ತೆ
ಕೆಲವನ್ನು ಹೀರುತ್ತಿದೆ.
ಇನ್ನು ಕೆಲವನ್ನು
ನನ್ನದೇ ಕೈಗಳು ಒರಸುತ್ತಿವೆ.
tumbaa ishtavaaytu
ಮುತ್ತಿನ ಹನಿಗಳು ಆರಿಸಿ, ಶೇಖರಿಸಿ ಜೋಪಾನವಾಗಿರಿಸಿಕೊಳ್ಳುವ೦ತಿದೆ. ಅಭಿನ೦ದನೆಗಳು.
ReplyDeleteಅನ೦ತ್
"ಒ೦ಟಿ ನಾನೇನಲ್ಲ,
ReplyDeleteಮನಸೇಕೊ ಒ೦ಟಿಯಾಗಿದೆಯಲ್ಲ." ..ಜೀವನವೇ ಹಾಗಲ್ಲವೆ? ನನ್ನ ಅನಿಸಿದಂತೆ ಪ್ರತೀ ಜೀವಿಯೂ ಮೂಲತ: ಒಂಟಿ ಎಂದೆನಿಸುತ್ತದೆ... ಮನತಟ್ಟುವ ಕವನಗಳು...ತುಂಬಾ ಸುಂದರವಾಗಿವೆ.
Nice... Liked ಕಣ್-ಹನಿ & ಗುರಿ very much.
ReplyDeleteಮುತ್ತಿನ ಹನಿಗಳನ್ನು ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು :)
ReplyDeleteಹೀಗೆ ಬರುತ್ತಿರಿ..ಪ್ರೋತ್ಸಾಹ ಸದಾ ಇರಲಿ..
ಸರಳ ಸಾಲುಗಳು. ಚಿಕ್ಕ ಚೊಕ್ಕ ಕವನಗಳು
ReplyDeletekavite.....
ReplyDeletechennnaagide.....
@ ದೀಪಸ್ಮಿತಾ : Dhanyavaadagalu :)
ReplyDelete@ ದಿನಕರ ಮೊಗೇರ : Blog ge swaagata sir..Mechiddakke Thanks :)