Monday, April 28, 2014

ಪ್ಯಾನ್ ಕೇಕ್ aka ಅಮೇರಿಕ ದೋಸೆ !

                                                                 Photo: iHop.com

ಅಮೆರಿಕಾಕ್ಕೆ ಬಂದು ಇಲ್ಲಿಯವರ food ತಿನ್ನಲಿಲ್ಲವಲ್ಲ ಅಂದುಕೊಂಡಿದ್ವಿ. ಯಾರೋ ಹೇಳಿದ್ರು ಇಲ್ಲಿ ಪ್ಯಾನ್ ಕೇಕ್ ತುಂಬಾ ಪ್ರಸಿದ್ಧ, ಇದು ಇಲ್ಲಿಯವರ breakfast item ಎಂದು. ಏನೋ ನಮ್ಮ ಮಸಾಲಾ ದೋಸೆ, ಸೆಟ್ ದೋಸೆ, ರವಾ ದೋಸೆ..... ಇತ್ಯಾದಿ ಇತ್ಯಾದಿ ನೆನಪಿಸಿಕೊಂಡು.. ಪ್ಯಾನ್ ಕೇಕ್ aka ಅಮೆರಿಕಾದ ದೋಸೆ ತಿನ್ನಲು ಬೆಳಿಗ್ಗೆ ತಿಂಡಿಯ ಹೊತ್ತು ಅಲ್ಲ ಮಧ್ಯಾಹ್ನ ಊಟದ ಹೊತ್ತು ಅಲ್ಲ ದ ಹೊತ್ತಿನಲ್ಲಿ brunch ಮಾಡಲು, ಕನ್ನಡದಲ್ಲಿ ಹೇಳಬೇಕೆಂದರೆ "ತೂಟ" ಮಾಡಲು ಹೊರಟೆವು.

ತುಂಬಾ ರಶ್ ಇತ್ತು, ನಮಗೆ ಖುಷಿ, ಓಹೋ ತುಂಬಾ ಚೆನ್ನಾಗಿರಬೇಕು ಅನ್ನಿಸಿತು. ವೈಟ್ ಮಾಡಿ ಒಳಗೆ ಹೋಗಿ ಕೂತಿದ್ದಕ್ಕೆ ಇನ್ನೂ ಖುಷಿ.. MTR ನೆನಪಾಯಿತು. ನೆಟ್ ನೋಡಿ ಮೊದಲೇ ಏನು order ಮಾಡಬೇಕೆಂದು ತೀರ್ಮಾನಿಸಿಕೊಂಡಿದ್ವಿ, ಅದಕ್ಕೆ ಗೊಂದಲವಿಲ್ಲದೆ, confident ಆಗಿ ಗೊತ್ತಿರೋವರ ತರಹ order ಮಾಡಿದ್ದಾಯಿತು. ಸೆಟ್ ದೋಸೆಯ ತರಹದ್ದು ೨ ಪ್ಲೇಟ್ ಬಂತು. ಇಲ್ಲಿಯವರ ತರಹ ನಾವುನೂ ಚಾಕು, ಫೋರ್ಕು, ಚಮಚ ಎಲ್ಲ ಬಳಸಿಕೊಂಡು ನಾಲ್ಕು ತುತ್ತು ತಿಂದಿದ್ದೆ ತಡ ಸಾಕೋ ಸಾಕಾಯ್ತು. ಯಾಕೋ ಅಡಿಗಾಸ್ ನ ನೆನಪು ಬಹಳ ಕಾಡಿತು... ಕೈನಲ್ಲಿ ದೋಸೆ ಚೂರನ್ನು ಚಟ್ನಿಯಲ್ಲಿ, ಸಾಂಬಾರ ನಲ್ಲಿ ಅದ್ದಿ ಅದ್ದಿ ತಿನ್ನುತ್ತಿದ್ದ ಹಾಗೆ..  ! ಇವರ ಪ್ಯಾನ್ ಕೇಕ್ ತುಂಬಾ ಸಿಹಿ ಜಾಸ್ತಿ, ಅದಕ್ಕೆ ಎಷ್ಟು baking powder ಹಾಕಿದ್ದಾರೆ ಎಂದರೆ ವಾಂತಿ ಬರುವಷ್ಟು ! ಅದರ ಮೇಲೊಂದಿಷ್ಟು cheese, sause, fruits ಎಲ್ಲಾ ಸುರಿದಿದ್ದಾರೆ.  ಒಂದೊಂದು ಪ್ಲೇಟ್ ಗೆ ತಲಾ ೫೦೦ ತೆತ್ತು ಮನೆಗೆ ಬಂದ್ವಿ. ಬಂದು ಜೀರಿಗೆ ತಿಂದ್ವಿ..  ವಾಂತಿ ಯಾಗದಂತೆ precaution..!

ಅನ್ನಿಸಿದ್ದು...
ನಮ್ಮ ದೋಸೆ ಯನ್ನು ನಾವು ನೈಸರ್ಗಿಕವಾದ ರೀತಿಯಲ್ಲಿ ಹುಳಿ ಬರಿಸಿ ಮಾಡುತ್ತೇವೆ.. ರುಚಿಕರ ಮತ್ತು ಆರೋಗ್ಯಕರ ! ಇಲ್ಲಿನ ಜನ, baking powder, gluten ಅದು ಇದು ಮಣ್ಣು ಮಶಿ ಎಂದು ಕೃತಕವಾಗಿ ತಯಾರಿಸುತ್ತಾರೆ. ಅದಕ್ಕೆ ಇಲ್ಲಿನ ಜನ obesity ಯಿಂದ ಬಳಲುತ್ತಿದ್ದಾರೆ. ಇಲ್ಲಿನ ಜನ ಪ್ಯಾಕಡ್ ಫುಡ್ ಬಹಳ ತಿನ್ನುತ್ತಾರೆ. ನನಗೆ ಕೆಲವರು ಕೇಳಿದ್ದರು ಇಲ್ಲಿ.. " ನೀವು ದಿನಾಲೂ ಅಡಿಗೆ ಮಾಡುತ್ತೀರಾ ಅಥವಾ ವಾರಕ್ಕೊಮ್ಮೆಯಾ ? " ಎಂದು.. ಇದೂ ಒಂದು ಪ್ರಶ್ನೆಯಾ ಎಂದುಕೊಂಡಿದ್ದೆ! ನಾನು ಆಫೀಸ್  ಕೆಲಸ ಮಾಡಿಕೊಂಡು ದಿನಕ್ಕೆ ೨ ಸಲ ಅಡಿಗೆ ಮಾಡುತ್ತೇನೆ, fridge ನಲ್ಲಿ ಅಡಿಗೆ ಇಡುವುದಿಲ್ಲ ಎಂದರೆ ಆಶ್ಚರ್ಯ ಇವರಿಗೆ. ಇವೆಲ್ಲ ನಮ್ಮ ಸಂಸ್ಕೃತಿಯಿಂದ ಬಂದಿದ್ದು ನಮಗೆ...ಅಪ್ಪ ಅಮ್ಮ ಕಲಿಸಿದ್ದು.. ನಮ್ಮದು ಪುರಾತನ ಸಂಸ್ಕೃತಿ, ಬಹಳ ಭದ್ರವಾದುದ್ದು... ಪಾಶಿಮಾತ್ಯರ ಪ್ರಭಾವಕ್ಕೆ ನಾವು ಒಳಗಾದರೂ ನಮ್ಮ ಸಂಸ್ಕೃತಿಯ ಬೇರು ಇರಬೇಕು, ಇವರಿಂದಲೂ ಕಲಿಯುವುದು ತುಂಬಾ ಇದೆ ಆದರೆ ಅವು ಬರಿಯ ಚಿಗುರಾಗಿರಲಿ...
"ಹಳೆ ಬೇರು ಹೊಸ ಚಿಗುರು ಜೀವನ ಸುಂದರ"

4 comments:

  1. ಪಾಶಿಮಾತ್ಯರ ಪ್ರಭಾವಕ್ಕೆ ನಾವು ಒಳಗಾದರೂ ನಮ್ಮ ಸಂಸ್ಕೃತಿಯ ಬೇರು ಇರಬೇಕು ಅನ್ನೋದು ನಿಜ.

    ಎಂತದೇ ಪ್ಯಾನ್ ಕೇಕ್ ಇದ್ದರೂ ನಮ್ಮ ದೋಸೆ ಬಿಡಕ್ಕಾಗಲ್ಲ ಅಲ್ವಾ? :)

    ReplyDelete
  2. ಅಮೆರಿಕದ ಜೀವನಪದ್ಧತಿಯನ್ನು ತಿಳಿದು ಮಜಾ ಅನ್ನಿಸಿತು. ದಯವಿಟ್ಟು ಇನ್ನಿಷ್ಟು ವಿಷಯಗಳನ್ನು ಬರೆಯಿರಿ.

    ReplyDelete
  3. ನಿಮ್ಮ ಕಾಮೆಂಟ್ ಗೆ ಧನ್ಯವಾದಗಳು ವಿ.ರಾ.ಹೆ.
    ದೋಸೆ ಬಗ್ಗೆ ಮಾತೇ ಇಲ್ಲ. ಚಿಕ್ಕವರಿದ್ದಾಗ ದಿನ ಬೆಳಿಗ್ಗೆ ದೋಸೆ ಮಾಡಿದ್ರೂ ಒಪ್ಪತ್ತಿಗಾಗಿ ರಾತ್ರಿ ಊಟದ ಬದಲು ದೋಸೆ ಮಾಡಿದರೆ ಖುಷಿಯಾಗುತ್ತಿತ್ತು.

    ReplyDelete
  4. ಓದಿದವರಿಗೆ ಖುಷಿಯಾದರೆ ನನಗೂ ಖುಷಿ. ಖಂಡಿತ ಬರೆಯುತ್ತೇನೆ.

    ReplyDelete