Tuesday, February 5, 2013

ವಿನೂತನ ಹೊಸವರ್ಷದ ಆಚರಣೆ !

ಹಳ್ಳಿ ಬದುಕಿನ ರೂಢಿಯ ನನಗೆ ಈ ಹೊಸ ವರ್ಷದ ಆಚರಣೆ ಹೊಸತು.೨೦೧೩ ನ್ನು  ಬರಮಾಡಿಕೊಳ್ಳುವ ಸಂದರ್ಭ ದಲ್ಲಿ ನಾನು ತೈವಾನ್ ನಲ್ಲಿದ್ದಿದ್ದರಿಂದ ಇಲ್ಲಿಯವರ ಹೊಸ ವರ್ಷದ ಆಚರಣೆಯನ್ನು ನೋಡುವ ಅವಕಾಶ ಸಿಕ್ಕಿತು.
ತೈವಾನ್ ನಲ್ಲಿರುವ Taipei 101,  2004 ರಿಂದ 2012 ರವೆರೆಗೆ ಪ್ರಪಂಚದ ಅತಿ ಎತ್ತರದ ಕಟ್ಟಡ ವಾಗಿತ್ತು. ಈಗ ಎರಡನೆಯದು. ಅಲ್ಲಿ ಪ್ರತಿ ವರ್ಷ ಪಟಾಕಿ ಸಿಡಿಸುವುದರ ಮೂಲಕ ಹೊಸ ವರ್ಷವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ ಕಟ್ಟಡದ ಸುತ್ತಲೂ ೧  ಲಕ್ಷಕ್ಕಿಂತಲೂ ಹೆಚ್ಚು ಜನ ಮೆರೆದರೂ ಯಾವುದೇ ಗಲಾಟೆಯಿಲ್ಲ. ಎಲ್ಲೆಲ್ಲಿ ಜಾಗವಿದೆಯೋ ಅಲ್ಲೆಲ್ಲಾ ಕಡೆ ಅವರವರದೇ ಆದ ಗುಂಪಿನಲ್ಲಿ ಬಂದು ಕೂತು, ಆಟವಾಡುತ್ತಲೋ, ತಿನ್ನುತ್ತಲೋ 12 ಘಂಟೆಯವರೆಗೆ ಟೈಮ್ ಪಾಸ್ ಮಾಡಿ, ಪಟಾಕಿ ಸಿಡಿಯುವುದನ್ನು ನೋಡಿಕೊಂಡು ಶಿಸ್ತಿನಿಂದ ಮನೆಗೆ ಹೊರಟು ಹೋದರು.ಆಲ್ಲಿಯ ಸರ್ಕಾರ ಅಷ್ಟೊಂದು ಜನರಿಗೆ ಮಾಡಿದ ವ್ಯವಸ್ಥೆ  ಹಾಗೂ ಅಷ್ಟೇ ಶಿಸ್ತಿನಿಂದ ಪಾಲಿಸಿದ ಜನರನ್ನು ನೋಡಿ ದಂಗಾದೆ ! ಇಲ್ಲಿಯ ಜನರ ಬಗ್ಗೆ ಇನ್ನೊಮ್ಮೆ ವಿವರವಾಗಿ ಹೇಳಲೇ ಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ "ಈ ದೇಶದ ಜನ ತುಂಬಾ ಒಳ್ಳೆಯವರು, ಮಾನವೀಯತೆಯನ್ನು ಹೊಂದಿದವರು ಹಾಗೂ ಖುಷಿಯಿಂದ ಬದುಕಲು ಅರಿತವರು"



 










ನಾವು ವೀಡಿಯೊ ಮಾಡಿಕೊಂಡು ಸ್ನೇಹಿತರೊಬ್ಬರು ಫೋಟೊ ತೆಗೆದುಕೊಂಡಿದ್ದರಿಂದ ಫೋಟೊ ಕ್ರೆಡಿಟ್ಸ್ ಎಲ್ಲಾ ಅವರಿಗೆ..
ಎಲ್ಲಾ ಫೋಟೊದಲ್ಲಿ ಬಲಭಾಗದಲ್ಲಿರುವ ಬಿಲ್ಡಿಂಗ್ ಅಡ್ಡ ಬರದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು..ಒಳ್ಳೆಯ ಜಾಗವನ್ನು ತೈವಾನ್ ನವರು ಮೊದಲೇ ಆರಿಸಿಕೊಂಡು ಕುಳಿತುಬಿಟ್ಟಿದ್ದರು ! ಸ್ಪೇನ್ ದೇಶದಿಂದ ಇಂಪೋರ್ಟ್ ಮಾಡಿಕೊಂಡ ಪಟಾಕಿಯನ್ನು ಜಿಪಿಎಸ್ ಟೆಕ್ನಾಲಜಿ ಯ ಮೂಲಕ ಸಿಡಿಸಿದರಂತೆ! 3 ಘಂಟೆ ಮುಂಚಿತವಾಗಿ ಹೋಗಿ 3 ನಿಮಿಷದವರೆಗೆ ಪಟಾಕಿ ಹೊಡೆಯುವುದನ್ನು ನೋಡಿಕೊಂಡು ಮತ್ತೆ 3 ಘಂಟೆ ಕ್ಯೂ ನಲ್ಲಿ ನಿಂತು ಮನೆಗೆ ಬಂದದ್ದಾಯಿತು!!
 

2 comments:

  1. ತುಂಬ ಆಕರ್ಷಕ ಚಿತ್ರಗಳನ್ನು ಕಳುಹಿಸಿದ್ದೀರಿ. ತೈವಾನೀಯರ ಶಿಸ್ತು ಮತ್ತು ಅವರ ಮಾನವೀಯತೆಯ ಬಗೆಗೆ ನೀವು ಬರೆದಿರುವುದು ಮೆಚ್ಚುಗೆಯಾಯಿತು. ವಿದೇಶೀಯರಿಂದ ನಾವು ಕಲಿಯಬೇಕಾದದ್ದು ಬಹಳಷ್ಟು ಇದೆಯಲ್ಲವೆ?

    ReplyDelete
  2. ಹೌದು. ಇವರಿಂದ ಕಲಿಯುವುದು ತುಂಬಾ ಇದೆ. ಇಲ್ಲಿನ crime rate ತುಂಬಾ ತುಂಬಾ ಕಡಿಮೆ ಇದೆ.
    ಮೆಟ್ರೋ ದಲ್ಲೆಲ್ಲಾ ಹಿರಿಯರು ಬಂದರೆ seat ಬಿಟ್ಟು ಕೊಡುತ್ತಾರೆ. ಶೀತವಾದರೆ ಮೂಗಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಬೇರೆಯವರಿಗೆ ಬರಬಾರದೆಂದು! ಹೊಸ ವರ್ಷದ ಮೊದಲ ದಿನ ನಮ್ಮ ದೇಶ ದ ನ್ಯೂಸ್ ನಲ್ಲಿ ಬರಿ ರೇಪ್ ಬಗ್ಗೆ , corruption ಬಗ್ಗೆ ಇದ್ದರೆ , ತೈವಾನ್ ನ ನ್ಯೂಸ್ ನಲ್ಲಿ ಹಿಂದಿನ ವರ್ಷದ ಸಾಧನೆಗಳೇನು ? ಮುಂದೆ ಏನೇನು ಮಾಡಬೇಕೆನ್ನುವುದಿತ್ತು!
    ಇದು Developed Country ಎಂದು ಇಲ್ಲಿಗೆ ಬಂದ ಮೇಲೆ ಗೊತ್ತಾಯಿತು...


    ನಿಮ್ಮ ಕಾಮೆಂಟ್ ಗೆ thanks :)

    ReplyDelete