Thursday, June 9, 2011

ಮರೆಯಾದ ಗೆಳೆಯನಿಗೆ..ಮುಸ್ಸ೦ಜೆಯ ಮೇಲಿರುವ ಪ್ರೀತಿಯನ್ನು ಇಮ್ಮಡಿಸಿಗೊಳಿಸಲೆ೦ದೇ ಬರುವ ನಿನ್ನ ಕೆ೦ಪು-ಕೆ೦ಪಾದ, ರ೦ಗು-ರ೦ಗಾದ ಮುಖವನ್ನು ನೋಡುತ್ತಿದ್ದರೆ ಎ೦ಥವನಿಗೇ ಆದರೂ ದಿನದ ದಣಿವು ಆರಿ ಹೋಗುತ್ತದೆ. ಅ೦ದು ಸ೦ಜೆ ನಿನ್ನ ನೋಡಲೆ೦ದೇ ಪಾರ್ಕ್ ಗೆ ಹೋಗಿ ಕುಳಿತೆ.ಮರಗಳ ಮಧ್ಯದಲ್ಲಿ೦ದ ಸರ ಸರನೆ ಇಳಿದು ಹೋದೆ..ನನ್ನ ನೋಡಿಯೂ ನೋಡದ೦ತೆ. ನಾನಲ್ಲಿ ಕೂತು ಮರಗಳಿಗೆ ಎಷ್ಟು ಹೇಳುತ್ತಿದ್ದೆ,"ಅವನ್ನನ್ನು ಬ೦ಧಿಸಿಡಿ ನಿಮ್ಮ ಚೌಕಟ್ಟಿನಲ್ಲಿ.."  ಅವು ನನ್ನ ಮಾತನ್ನು ಕೇಳಲಿಲ್ಲ, ಆವತ್ತು ಗುಡ್ಡಗಳ ಮಧ್ಯೆ ನೀನು ಜಾರಿಕೊಳ್ಳುತ್ತಿದ್ದಾಗ ಗುಡ್ಡಗಳೂ ಸಹ ನನ್ನ ಮಾತನ್ನು ಕೇಳಲಿಲ್ಲ.ಅದಕ್ಕೆ ನಾನು ನಿನ್ನನ್ನು ನನ್ನ ಕನಸಿನ ಚೌಕಟ್ಟಿನೊಳಗೆ ಶಾಶ್ವತವಾಗಿ ಬ೦ಧಿಸಿಟ್ಟಿಬಿಟ್ಟೆ..ಎಲ್ಲಿಗೂ ಹೋಗದ ಹಾಗೆ. ’ಎಲ್ಲಿಗೆ ಹೋಗ್ತಿಯಾ..ಬೆಳಿಗ್ಗೆ ಬ೦ದೇ ಬರುತ್ತೀಯಲ್ಲ..’ ಎ೦ದುಕೊ೦ಡು ಮನೆಗೆ ವಾಪಸ್ಸಾದೆ..ನಿನ್ನದೇ ನೆನಪಲ್ಲಿ ಮಲಗಿದ್ದ ನಾನು ನಿನ್ನದೇ ನೆನಪಿನಲ್ಲೇ ಎದ್ದೆ ಬೆಳಿಗ್ಗೆ. ಎದ್ದು ಹೊರಬ೦ದು ನೋಡಿದಾಗ ನಿನ್ನ ನೋಡಿ ಮನಸ್ಸಿಗೆ ಹಿತವೆನಿಸಿತು.ಎಳೆ ಎಳೆಯಾಗಿ ನಿನ್ನ ಕಿರಣಗಳು ಗಿಡ-ಮರದ ಮರೆಯಿ೦ದ ತೂರಿಕೊ೦ಡು ಬರುತ್ತಿರುವುದನ್ನು ನೋಡುತ್ತಿದ್ದರೆ ಕಷ್ಟಪಟ್ಟು ಮು೦ಜಾನೆಯ ಹಾಸಿಗೆಯನ್ನು ಬಿಟ್ಟಿದ್ದು ಸಾರ್ಥಕವಾಯಿತು ಎನ್ನಿಸಿತು. ಬೆಳ್ಳಿ ರಥದ ಮೇಲೆ ಏರಿ ಬರುವ ನಿನ್ನ ಮೊದಲ ಕಿರಣಗಳ ಸ್ಪರ್ಷವಾದಾಗ ಮನಸ್ಸಿನಲ್ಲಿ ಹೊಸ ಚೈತನ್ಯ, ಉತ್ಸಾಹ ತು೦ಬಿತು.


ಮಧ್ಯಾಹ್ನದಲ್ಲಿ ನಿನ್ನ ಕೋಪ ನೆತ್ತಿಗೇರಿದಾಗ ಬೆ೦ಕಿಯ೦ತೆ ಸುಡುತ್ತಿದ್ದೆಯಲ್ಲ! ನೀನು ಉರಿಯುವುದರ ಜೊತೆ ನನ್ನನ್ನು ನಿನ್ನ ಕೋಪದಲ್ಲಿ ಉರಿಸಿದೆಯಲ್ಲ.ನನ್ನ ಬಗ್ಗೆ ಸ್ವಲ್ಪಾನೂ ಕರುಣೆ-ಪ್ರ‍ೀತಿಯಿಲ್ಲವೇ..ಅಷ್ಟೊ೦ದು ಕೋಪ ಒಳ್ಳೆಯದಲ್ಲ ಅ೦ತ ಎಷ್ಟು ಸಲ ಹೇಳಿದ್ದೇನೆ ನಿನಗೆ..ನನ್ನ ಮಾತು ಕೇಳಲಿಲ್ಲ.. ಸಿಟ್ಟು ಬ೦ದು ಹೊರಟುಹೋಗು ಅ೦ತ ಬೈದಿದ್ದಕ್ಕೆ ನನ್ನ ಮೇಲೆ ಕೋಪವೇ ? ಎಲ್ಲೂ ಕಾಣುತ್ತಿಲ್ಲ ! ಅದಕ್ಕೆ ಇರಬೇಕು ನೀನು ಮಳೆರಾಯನ ಕರಿಮೋಡಗಳ ಮರೆಯಲ್ಲಿ ಅಡಗಿ ಕುಳಿತಿರುವುದು ಅಥವಾ ನಿನಗೂ ಮಿ೦ಚೆ೦ದರೆ ಭಯವೇ ನನ್ನ ಹಾಗೆ..?

18 comments:

 1. ಮಳೆಗಾಲ ಪ್ರಾರ೦ಭವಾದ ಮೇಲೆ ವಾತಾವರಣ ಹಿತವಾಗಿದೆ.
  ಭಾವನೆಗಳು ಬೇಡವೆ೦ದರೂ ಹರಿಯುತ್ತಿವೆ..
  ಸೂರ್ಯ ಮೋಡದ ಮರೆಗೆ ಹೋಗಿದ್ದರಿ೦ದ ಖುಷಿಯೇ ಆದರೂ ಅವನ್ನನ್ನು ಮಿಸ್ ಮಾಡಿಕೊ೦ಡು ಸ್ವಲ್ಪ ಚೈಲ್ಡಿಶ್ ಆಗಿ ನನ್ನ ಮೊಬೈಲ್ ನಲ್ಲಿ ತೆಗೆದಿರೊ ಫೋಟೊ ಗಳ ಜೊತೆ ಬರೆದಿರುವುದು.. ಹೇಗಿದೆ ಹೇಳಿ..

  ReplyDelete
 2. ಚ೦ದವಾಗಿದೆ.. ಬರಹ..
  ಮಳೆ ಗಾಲದಲ್ಲಿ ಚಳಿಯಾಗುತ್ತಲ್ಲ.. ಅದಕ್ಕೆ ಮೋಡದ ಸ್ವೆಟರ್ ಹಾಕಿಕೊ೦ಡಿದ್ದಾನ೦ತೆ..ಸೂರ್ಯ..
  ನನ್ನ ಮಗ ಹೇಳಿದ್ದು..:)
  ಚಿತ್ರಗಳೂ ಚನ್ನಾಗಿವೆ..

  ReplyDelete
 3. malegalada agamanakke olleya lekhana.. houdu avanumatu kelada tunta :)

  ReplyDelete
 4. ಹೂಂ..... ಒಂದೇ ಸೂರ್ಯನಿಗೆ ದಣಿವನ್ನು ಆರಿವ ಮತ್ತೆ ದಣಿವನ್ನು ಮೂಡಿಸುವ ಎರಡೂ ಕಲೆ ಗೊತ್ತಿದ್ದು......

  ಅವಂಗೆ ನೀ ಬೈದದ್ದಕ್ಕೆ ಸಿಟ್ಟಂತೆ,.....

  ಚನ್ನಾಗಿದ್ದು.....

  ReplyDelete
 5. @ ಚುಕ್ಕಿಚಿತ್ತಾರ : ನಿಮ್ಮ ಮಗನ ಉತ್ತರ ತುಂಬಾ ಚೆನ್ನಾಗಿದೆ.. ಮುದ್ದಾದ ಉತ್ತರ :)
  ನಿಮ್ಮ ಕಾಮೆಂಟ್ಗೆ ಧನ್ಯವಾದಗಳು.

  ReplyDelete
 6. @ Vani : Nija nija...maatu kelada tuntane sari...

  ReplyDelete
 7. @ ಕನಸು ಕಂಗಳ ಹುಡುಗ : Hun matte eshtu sokku avange.. uridu uridu ishtu dina namagella bevarilisi bitta..

  iga swalpa dina hinge sittu maadkyali...navu tannage irana :)

  Thanks for your comment :) Keep Visiting !

  ReplyDelete
 8. ಸುಂದರ ಚಿತ್ರಗಳು ಮತ್ತು ಚಂದದ ಸಾಲುಗಳು ..:)

  ReplyDelete
 9. ಖುಶಿ ಕೊಡುವ ಚಿತ್ರಗಳು.

  ReplyDelete
 10. ಚಿತ್ರಗಳಿಗೆ ಭಾವನೆಯ ಲೇಪನ ಪದ ಪ್ರಯೋಗ ಎಲ್ಲಾ ಸುಂದರವಾಗಿ ಮೂಡಿ ಬಂದಿದೆ ಕವಿತಾವ್ರೆ...ಕವನ ಮಾಡಿದ್ರೆ ನನಗೆ ಇನ್ನೂ ಇಷ್ಟ ಆಗ್ತಿತ್ತೇನೋ...(ನನ್ನ ಬ್ರಾಂಡ್ ಅಲ್ವಾ ಅದಕ್ಕೆ ಹಹಹ)

  ReplyDelete
 11. ಧನ್ಯವಾದಗಳು ಆಜಾದ್ ಸರ್ :)
  ನೀವ್ ಹೇಳಿದ್ ನಿಜ..ಕವನ ಮಾಡಲು ಟ್ರೈ ಮಾಡಬೇಕು.....

  ReplyDelete
 12. ಚಿತ್ರ-ಚಿತ್ರಣದ ಜುಗಲ್ ಬ೦ದಿ ಸು೦ದರವಾಗಿ ಮೂಡಿ ಬ೦ದಿದೆ ಕವಿತಾ ಅವರೆ. ಅಭಿನ೦ದನೆಗಳು.

  ಅನ೦ತ್

  ReplyDelete
 13. ಅನ೦ತ್ ರಾಜ್ ರವರೆ ನಿಮ್ಮ ಕಾಮೆ೦ಟ್ ಗೆ ಧನ್ಯವಾದಗಳು :)
  ನಾನು ತೆಗೆದ ಈ ಫೋಟೊಸ್ ನೋಡಿದಾಗ ಯೋಚನೆಗಳು,ಕಲ್ಪನೆಗಳು,ಭಾವನೆಗಳು ಶಬ್ದಗಳಾಗಿ ಮನಸ್ಸಿನಲ್ಲಿ ಹರಿಯಲಾರ೦ಭಿಸಿದವು.. ಮನಸ್ಸಿನಲ್ಲಿರುವುದನ್ನು ಬರಹದಲ್ಲಿಳಿಸಿದಾಗ ಸ್ವಲ್ಪ ಚೈಲ್ಡಿಶ್ ಅನ್ನಿಸಿತು...ಆದರೂ ಬ್ಲಾಗ್ ಗೆ ಹಾಕಿದೆ.

  ReplyDelete
 14. ee sambhashane...
  nimma ee sneha sambhaashanee...
  superiddu kavitakka...

  ReplyDelete
 15. @ ಅನುಶ್ರೀ : Navilu Gari ge swaagata..sneha sambhaashanee yannu mechiddakke thanksu..

  ReplyDelete