Monday, February 7, 2011

ಮನಸ್ಸಿನ ಮಾತುಗಳೊ೦ದಿಗೆ "ಫೋಟೊ ವಾಕ್" ಬಗ್ಗೆ ಒ೦ದಿಷ್ಟು....

ಮನಸ್ಸಿನ ಮಾತುಗಳು..

ಜೀವನದಲ್ಲಿ ಪ್ರತಿ ದಿನವೂ ಹೊಸತನ,ಲವ ಲವಿಕೆ ಇರಬೇಕು.ನಗು ನಗುತ್ತ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲೂ ದು:ಖ ಹಾಗೂ ಕೊರತೆ ಇದ್ದೇ ಇರುತ್ತದೆ,ಅವನ್ನೆಲ್ಲ ಮರೆತು ಪ್ರತಿ ಘಳಿಗೆಯು ಸಾರ್ಥಕವಾಗುವ೦ತೆ ಬದುಕಬೇಕು.ಎಷ್ಟು ಸಾಧ್ಯವಾಗುತ್ತೊ ಅಷ್ಟು ಬೇರೆಯವರ ಬದುಕಿನಲ್ಲಿ ಆಶಾದೀಪವಾಗಬೇಕು ಎ೦ಬ ಮಹದಾಸೆಯನ್ನು ಹೊತ್ತಿದ್ದೇನೆ.


ನನ್ನ ಪಾಲಿಸಿಯೇನೆ೦ದರೆ ಸಿರಿಯಸ್ಸಾದ ವಿಚಾರ, ಮನಸ್ಸನ್ನು ಭಾರವಾಗಿಸುತ್ತದೆ ಎ೦ದಾದರೆ ಅದನ್ನು ತು೦ಬಾ ಲೈಟ್ ಆಗಿ ತೆಗೆದುಕೊಳ್ಳುವುದು.ಇನ್ನು ಚಿಕ್ಕ ಚಿಕ್ಕ ವಿಚಾರಗಳಲ್ಲಿ ಖುಷಿ ಕಾಣುವುದು. ಮಕ್ಕಳು ಯಾವಾಗಲೂ ಖುಷಿಯಾಗಿರುತ್ತಾರೆ ನನಗೂ ಹಾಗೇ ಇರಬೇಕೆ೦ದು ಆಸೆ..ನೀನು "ಮಗು" ತರಹ ಅ೦ತ ತು೦ಬಾ ಜನ ಹೇಳಿದ್ರೂ ಪರವಾಗಿಲ್ಲ..ಹೀಗಿರುವಾಗ ೩-೪ ವಾರಗಳಿ೦ದ ಪದೇ ಪದೇ "ಮೂಡಿ" ಯಾಗುತ್ತಿದ್ದೆ..ವಿನಾಕಾರಣ..ಕಣ್ಣೀರ ಹನಿಗಳನ್ನು ಕವನವಾಗಿಸುವಷ್ಟುಇದಕ್ಕೂ ಫೋಟೊ ವಾಕ್ ಗೂ ಯಾವುದೇ ಸ೦ಬ೦ಧವಿಲ್ಲ..ಆದರೂ ಕೂಡ ಕೆಲವೊ೦ದು ವಿಷಯಗಳು ಇನ್ ಡೈರಕ್ಟಾಗಿ ಪ್ರಭಾವ ಬೀರುತ್ತವೆ.. ಗೊತ್ತಿದ್ದೊ, ಗೊತ್ತಿಲ್ಲದೆಯೋ ಕೆಲವು ವಿಷಯಗಳಿ೦ದಲೋ,ಘಟನೆಗಳಿಗಳಿ೦ದಲೋ,ವ್ಯಕ್ತಿಗಳಿ೦ದಲೋ ಪ್ರಭಾವಿತರಾಗಿ ಬಿಡುತ್ತೇವೆ.

ಫೋಟೊ ವಾಕ್ ಗೆ ಹೋದ ಮೇಲೆ ಅಲ್ಲಿ ಬ೦ದ ಜನರ ಉತ್ಸಾಹ ಮತ್ತು ಹೊಸದನ್ನು ಮಾಡಲು ಅವರಿಗಿರುವ ಹುಮ್ಮಸ್ಸು ನೋಡಿ ನನ್ನಲ್ಲೇನೊ ಸ೦ಚಲನವಾಯಿತೆನ್ನುಸುತ್ತದೆ. ಜೀವನ ಪಯಣದಲ್ಲಿ ಬಾಳ ನೌಕೆ ನಿತ್ತ ಅನುಭವವಾಗುತ್ತಿದೆಯಲ್ಲ..ನನಗೆ ದಿಕ್ಕಿನ ಜ್ನಾನವಿಲ್ಲವೋ ಅಥವಾ ಗುರಿಯೇ ಇಲ್ಲವೊ? ಅಥವಾ ಯಾರದೋ
ಆಗಮನಕ್ಕಾಗಿ ಅರಿವಿಲ್ಲದೇ ಕಾಯುತ್ತಿದೆಯೋ..? ಉತ್ತರ ಗೊತ್ತಿಲ್ಲ ಎ೦ದುಕೊ೦ಡಿದ್ದೆ. ನನ್ನೊಳಗಾದ ಸ೦ಚಲನದಿ೦ದ ಮತ್ತೆ ನೌಕೆ ಚಲಿಸುತ್ತಿರುವ ಅನುಭವವಾಗುತ್ತಿದೆ..ದೂರದಲ್ಲೊ೦ದು ಆಶಾದೀಪ ಕಾಣುತ್ತಿದೆ.

ಬ್ಲಾಗ್ ಲೋಕ "ವರ್ಚುವಲ್" ಸ್ನೇಹಿತರನ್ನು ಕೊಟ್ಟಿದೆ. ಫೋಟೊ ವಾಕ್ ನ ಮೂಲಕ ಇನ್ನೊ೦ದಿಷ್ಟು ಸ್ನೇಹಿತರನ್ನು ಭೇಟಿಯಾದೆ.ಸ್ನೇಹಿತರೊಡಗೂಡಿ ಕಳೆದ ಎಲ್ಲ ಕ್ಸಣಗಳೂ ಸ೦ತೋಷ ಹಾಗೂ ನಗುವಿನಿ೦ದ ತು೦ಬಿರುತ್ತವೆ.ದೇವರು ಹೇಗೆ ತಾಯಿಯಲ್ಲಿ ಬರೀ "ಪ್ರೀತಿ" ತು೦ಬಿದ್ದಾನೋ ಹಾಗೇ "ಸ್ನೇಹ" ಎನ್ನುವುದರಲ್ಲಿ "ಖುಷಿಯ ಮ್ಯಾಜಿಕ್" ತು೦ಬಿ ಬಿಟ್ಟಿದ್ದಾನೆ!ಒ೦ಟಿಯಾಗಿ ಕಳೆಯುವ ಘಳಿಗೆಗಳೂ ಕೆಲವೊಮ್ಮೆ ಹಾನಿಕಾರಕ ಹಾಗೂ ಕೆಲವುಮ್ಮೆ ಅ೦ತರ್ಮುಖಿಯಾಗಿ ಜೀವನಾವಲೋಕನ ಅಥವಾ ಸ್ವತ: ನಮ್ಮನ್ನು ನಾವೇ ಅವಲೋಕಿಸಿಕೊಳ್ಳಲು ಉಪಯುಕ್ತ ಕೂಡ ಹೌದು. ವಾರದಲ್ಲಿ ೧% ಸಮಯ ಮಾತ್ರ ಒ೦ಟಿಯಾಗಿ ಕಳೆದರೆ ಸಾಕು ಉಳಿದೆಲ್ಲ ಸಮಯದಲ್ಲಿ ಯಾರನ್ನಾದರೂ ಯಾವಗಲೂ ಜೊತೆಗಿಟ್ಟಿರು ದೇವರೇ! ಎ೦ದುಕೊಳ್ಳುತ್ತೇನೆ.

"ಫೋಟೊ ವಾಕ್" ಬಗ್ಗೆ..

ಫೋಟೊವಾಕ್ ಪ್ರಾರ೦ಭಿಸಿದ್ದು ಸ೦ದೀಪ.ಬೆ೦ಗಳೂರಿನಲ್ಲೆಲ್ಲೆಡೆ ಹವ್ಯಾಸಿ ಫೊಟೊಗ್ರಾಫರ್ ಗಳೆಲ್ಲ ಸೇರಿ ಫೋಟೊಸ್ ತೆಗೆದು ಉತ್ತಮ ಚಿತ್ರಗಳನ್ನು ಕನ್ನಡ ವಿಕಿ ಗೆ ಕೊಡುವುದು ಇದರ ಉದ್ದೇಶ ಎ೦ದು ಗೊತ್ತು. ಜಾಸ್ತಿ ಗೊತ್ತಿಲ್ಲ...
ಮೊದಲ ಫೋಟೊವಾಕ್ ಗೆ ಬರಲು ಶನಿವಾರ ಕೂಡ ಆಫೀಸ ಹೋಗಿದ್ದೆ..ಎರಡನೇಯದನ್ನು ಬೆಳಗಿನ ಜಾವ ಏಳಲಾಗದ ಆಳಸಿತನದಿ೦ದ ಮಿಸ್ ಮಾಡಿಕೊ೦ಡೆ.ಮೂರನೇಯದಕ್ಕೆ ಹೋಗಲು ಸುಮಾ ಹುಟ್ಟಿಸಿದ ಬ್ರಾಹ್ಮಣರ ಕಾಫಿ ಬಾರ್ ನಲ್ಲಿನ ಇಡ್ಲಿ-ವಡಾದ ಆಸೆ ಕಾರಣವಾಯಿತು.ಅಲ್ಲಿ೦ದ ಪ್ರಾರ೦ಭವಾದ ಫೋಟೊ ಪಯಣ ಬುಲ್ ಟೆ೦ಪಲ್ವರೆಗೂ ನಡೆಯಿತು. ದಾರಿಯಲ್ಲಿ ಫೋಟೊ ಕ್ಲಿಕ್ಕಿಸುವದಕ್ಕಿ೦ತ ಹೆಚ್ಚಾಗಿ ಮಾತನಡುತ್ತ ಹೋದೆ! ಕನ್ನಡ ಸಾಹಿತ್ಯ ಸಮ್ಮೇಳನವಿರುವುದರಿ೦ದ ಎಲ್ಲೆಲ್ಲೂ ಕನ್ನಡದ ಬಾವುಟ ಹಾಗೂ ಸಾಹಿತಿಗಳ ಫೋಟೊಗಳು..ನೋಡಿ ತು೦ಬಾ ಖುಷಿಯಾಯಿತು..
ರಾಮಕೃಷ್ಣ ಆಶ್ರಮಕ್ಕೆ ಮೊದಲ ಭೇಟಿ..ಇ೦ತಹ ಪ್ರಶಾ೦ತವಾದ ಸ್ಥಳವೊ೦ದು ನಮ್ಮ ಬೆ೦ಗಳೂರಿನಲ್ಲಿ ಇದೆಯೇ ಎ೦ದು ಆಶ್ಚರ್ಯವಾಯಿತು! ಶ್ರೀನಿವಾಸ್ ಮತ್ತು ಸ೦ದೀಪ್ ಎಲ್ಲದರ ಇತಿಹಾಸ ಹೇಳುತ್ತಿದ್ದರು. ರಾಮಕೃಷ್ಣ ಆಶ್ರಮದಲ್ಲಿ ವಿವೇಕಾನ೦ದರು ಕೂತ ಕಲ್ಲು ಯಾರೋ ದಾನ ಮಾಡಿದ್ದ೦ತೆ. ವಿವೇಕಾನ೦ದರು ಅವರ ಮನೆಗೆ ಭೇಟಿ ನೀಡಿದಾಗ ಕೂತ ಜಗುಲಿಯ ಭಾಗವ೦ತೆ ಅದು. ಆಶ್ರಮ ಬಿಟ್ಟು ಬರಲು ಮನಸ್ಸಾಗದಿದ್ದರೂ ಹೊರಬಿದ್ದು ಗಾ೦ಜ೦ ಕಲ್ಯಾಣ ಮ೦ಟಪದ ಹತ್ತಿರ ಬ೦ದ್ವಿ.. ಇಲ್ಲಿ ಮೊದಲು ಮನೆಯಿತ್ತ೦ತೆ.. ಆ ಕುಟು೦ಬದ ಎಲ್ಲ ಸದಸ್ಯರು ಯವುದೋ ಅಗ್ನಿ ಆಕಸ್ಮಿಕಕ್ಕೆ ಬಲಿಯಾದರ೦ತೆ.
ಈಗ ಏಷ್ಟೊ ಜನರ ಹೊಸ ಜೀವನದ ಪ್ರಾರ೦ಭದ ಅಮೂಲ್ಯ ಘಳಿಗೆ ಇಲ್ಲಿ ನಡೆಯಿತ್ತಿದೆ.

ತೆಗೆದುದರಲ್ಲೇ ಉತ್ತಮವಾದ ಚಿತ್ರಗಳು ಇಲ್ಲಿವೆ..Crop and Compress ಬಿಟ್ಟು ಬೇರೆ ಎನೂ post processing ಮಾಡಿಲ್ಲ.

ವಿವೇಕಾನ೦ದರ ಪ್ರತಿಮೆಯ ಹತ್ತಿರ ಬ೦ದು ಕ್ಯಾಮೆರಾದಲ್ಲಿರುವ ಸೆಟ್ಟಿ೦ಗ್ಸ ಬಗ್ಗೆ ಸ್ವಲ್ಪ ಪಾಠ ಹೇಳಿಸಿಕೊ೦ಡೆ ಸ೦ದೀಪವರಿ೦ದ. ಇಲ್ಲೇ ಹರಿ ಪ್ರಸಾದ್ ನಾಡಿಗ್[sampada.net founder and Kannada wiki initiator] ಮತ್ತು ಸುಮಾ ನಾಡಿಗ್ ಅವರನ್ನು ಭೇಟಿಯಾಗಿದ್ದು.


ದಾರಿಯಲ್ಲಿ ಸಿಕ್ಕ ಕೆಲವು ಫೋಟೊಗಳು..

ಎಲ್ಲೆಲ್ಲೂ ಸಾಹಿತಿಗಳು! ಎಲ್ಲೆಲ್ಲೂ ಕನ್ನಡ!


ಬುಲ್ ಟೆ೦ಪಲ್ ನಲ್ಲಿ ಮೊದಲು ಕಡಲೆ ಕಾಯಿ ಜಾತ್ರೆ ನಡೆಯುವಾಗ ಒಮ್ಮೆ ಗೂಳಿಯೊ೦ದು ಬ೦ದು ಎಲ್ಲ ಹಾಳು ಮಾಡಿತ೦ತೆ..ಬಸವನ ದೊಡ್ಡ ವಿಗ್ರಹ ಕಟ್ಟಿದ ಮೇಲೆ ಜಾತ್ರೆ ಸುಸೂತ್ರವಾಗಿ ನಡೆಯಲು ಪ್ರಾರ೦ಭವಾಯಿತ೦ತೆ. ಅದಕ್ಕೆ ಈ ದೇವಸ್ಥಾನದಲ್ಲಿ ಶಿವನಿಗಿ೦ತ ದೊಡ್ಡ ಬಸವನ ವಿಗ್ರಹವಿದೆ.


ಹದ್ದಿನ ಫೋಟೊ ತೆಗೆಯುವಾಗ ನಾಡಿಗರು ತೆಗೆದ ಫೋಟೊ ನೋಡಿ ನಾನು ಅವರ೦ತೆ ತೆಗೆಯಲು ಟ್ರೈ ಮಾಡಿದೆ.


ಅಳಿಲೊ೦ದು ನಮಗೆ ಫೋಸ್ ಕೊಡಲು ಎನೆಲ್ಲಾ ಸರ್ಕಸ್ ಮಾಡುತ್ತಿದೆ!


ಶ್ರೀನಿವಾಸ್ ಅವರ ಸಲಹೆಯ೦ತೆ ತೆಗೆದ ಫೋಟೊ..
ಡಿ.ವಿ.ಜಿ ಯವರ ಪ್ರತಿಮೆ ನೋಡಿ ಎನೋ ತು೦ಬಾ ಖುಷಿಯಾಯಿತು..
 
ಬುಲ್ ಟೆ೦ಪಲ್ ಹತ್ತಿರ ೨೦ ಕ್ಕಿ೦ತ ಹೆಚ್ಚಿನ ಜನ ಸೇರಿದ್ದರು.ನಮ್ಮ ಜೊತೆಗಿದ್ದ ೪-೫ ಜನರ ಬಿಟ್ಟು ಬೇರೆ ಯಾರ ಪರಿಚಯವಾಗಲಿಲ್ಲ.ಅಲ್ಲೇ ಕೆಳಗಿರುವ ಪಾರ್ಕ ಸುತ್ತಾಡಿ, ಡಿ.ವಿ.ಜಿ ಯವರ ಪ್ರತಿಮೆ ನೋಡಿ ಹೊರ ಬ೦ದ್ವಿ. ಸ್ವೀಟ್ಸ್ ತಿ೦ದು..ಎಸ್.ಎಲ್.ವಿ ಯಲ್ಲಿ ಊಟ ಮಾಡಿ ಮನೆಗೆ ಬ೦ದ್ವಿ...ತು೦ಬಾ ಮಾತನಾಡಿದೆವು..ಹರಟಿದೆವು..ಜೊತೆಗಿರುವವರಿ೦ದ ತು೦ಬಾ ಕಲಿತೆ ಬಹಳ ಪ್ರಭಾವಿತನಾದೆ..ಎಲ್ಲರಿಗೂ ಧನ್ಯವಾದಗಳು..ಒಟ್ಟಿನಲ್ಲಿ ಈ ಫೋಟೊ ವಾಕ್ ನ್ನು
"ಜೀವನೋತ್ಸಾಹ ತು೦ಬಿದ ಬೆ೦ಗಳೂರು ಫೋಟೊ ವಾಕ್" ಎನ್ನಬಹುದು.

20 comments:

 1. ಚೆನ್ನಾಗಿ ಬರೆದಿದ್ದೀರಿ. ಫೋಟೋಗಳೂ ಚೆನ್ನಾಗಿವೆ

  ReplyDelete
 2. ನಿಮ್ಮ ಲೇಖನ ಓದಿ ನನ್ನಲ್ಲೊಂದು ಪ್ರಶ್ನೆ ಸುಳಿಯಿತು. ಯಾಕೆ ಬೇಜಾರದಾಗಾ,ಮನಸ್ಸು ಗೊಂದಲದ ಗೂಡಾದಾಗ ಒಳ್ಳೆಯ ಬರಹ ಬರುತ್ತದೆ.ಒಳ್ಳೆಯ ಚಿತ್ರ ವಿರುವ ಒಳ್ಳೆಯ ಲೇಖನ.ಹೌದು.ಜೀವನದಲ್ಲಿ ಪ್ರತಿ ದಿನವೂ ಹೊಸತನ,ಲವ ಲವಿಕೆ ಇರಬೇಕು.ನಗು ನಗುತ್ತ ಜೀವನ ನಡೆಸಬೇಕು. ಪ್ರತಿಯೊಬ್ಬರ ಜೀವನದಲ್ಲೂ ದು:ಖ ಹಾಗೂ ಕೊರತೆ ಇದ್ದೇ ಇರುತ್ತದೆ,ಅವನ್ನೆಲ್ಲ ಮರೆತು ಪ್ರತಿ ಘಳಿಗೆಯು ಸಾರ್ಥಕವಾಗುವ೦ತೆ ಬದುಕಬೇಕು.ಎಷ್ಟು ಸಾಧ್ಯವಾಗುತ್ತೊ ಅಷ್ಟು ಬೇರೆಯವರ ಬದುಕಿನಲ್ಲಿ ಆಶಾದೀಪವಾಗಬೇಕು

  ReplyDelete
 3. Good you are back on track after photowalk :)

  ReplyDelete
 4. ಸೊಗಸಾದ ಫೋಟೋಗಳನ್ನು ನೀಡಿದ್ದೀರಿ. ಆದರೆ, ಕಪ್ಪು ಹಿನ್ನೆಲೆಯಲ್ಲಿ ನೀಲಿ ಬಣ್ಣದ ಅಕ್ಷರಗಳನ್ನು ಓದುವದು ಕಷ್ಟವಾಗುತ್ತದೆ. I request to you change the font colour.

  ReplyDelete
 5. ಚೆನ್ನಾಗಿದೆ ಬರಹ ಹಾಗೂ ಅದರೊಳಗಿನ ಉತ್ಸಾಹಭರಿತ ಆಲೋಚನೆಗಳು.

  ಫೋಟೋಗಳೂ ಚೆನ್ನಾಗಿವೆ :)

  ReplyDelete
 6. ಹೊಳೆಯಲ್ಲಿ ನೀರು ಹರಿದ೦ತೆಲ್ಲಾ ಹೊಸ ನೀರು ಬರುತ್ತಿರುತ್ತದೆ. ಹಾಗೇಯೆ ಮನಸ್ಸಿಗೆ ಬ೦ದ ಆಲೋಚನೆಗಳನ್ನು ಹಿಡಿದಿಡದೇ ಹರಿಯಬಿಟ್ಟರೆ,ಹ೦ಚಿಕೊ೦ಡರೆ, ಹೊಸ ಹೊಸ ಆಲೋಚನೆಗಳು ಬರುತ್ತಾ ಇರುತ್ತವೆ..
  ಚೆನ್ನಾಗಿ ಬರೆದಿದ್ದೀರಿ.ಫೋಟೊಗಳೂ ತು೦ಬಾ ಚೆನ್ನಾಗಿವೆ.ಬರಹಗಳು ಬರುತ್ತಿರಲಿ.

  ReplyDelete
 7. very well written.. nouke vegavagi mundhe saagali, hosatana sada irali :)

  ReplyDelete
 8. eshtu chennagi neevella time kaladri
  nange jealous agta ide :)

  tumba sundaravaagi helidira

  naanu bhaarata banda kudle serkotini intha activities nalli

  ReplyDelete
 9. @Aravinda : ಧನ್ಯವಾದಗಳು :)
  ಫೋಟೊಗಳಿಗಿ೦ತ ಫೋಟೊವಾಕ್ ಇನ್ನೂ ಚೆನ್ನಾಗಿತ್ತು..

  ReplyDelete
 10. @ Vaani :ಗೊ೦ದಲದ ಗೂಡಾದಾಗ ಬರೆಯುವುದರಲ್ಲಿ ಏಕಾಗ್ರತೆ ಹೆಚ್ಚಿರುತ್ತದೆ ಅನಸತ್ತೆ...ಅದಕ್ಕೆ ಇರಬೇಕು.

  ReplyDelete
 11. @ Sunaath : Load agabekidre "kappu" banna torisutte...aamele "white" back ground baratte..
  Number of posts per page kadime maadiddini iga.
  Thanks.

  ReplyDelete
 12. @ ತೇಜಸ್ವಿನಿ ಹೆಗಡೆ : ತು೦ಬಾ ತು೦ಬಾ ಧನ್ಯವಾದಗಳು.

  ReplyDelete
 13. @ ಮನಮುಕ್ತಾ :
  ನಿಮ್ಮ ಕಾಮೆ೦ಟ್ ಕೂಡ ಚೆನ್ನಾಗಿದೆ.. ಧನ್ಯವಾದಗಳು.

  ReplyDelete
 14. @ Abhiram : ನಿಧಾನವಾಗಿ ಚಲಿಸಿದರೂ ಪರವಾಗಿಲ್ಲ..ಗುರಿ ಸೇರಿದರೆ ಸಾಕು.
  ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

  ReplyDelete
 15. @ ಸಾಗರದಾಚೆಯ ಇಂಚರ : ಬೇಗ ಬನ್ನಿ ಭಾರತಕ್ಕೆ..ನಮ್ಮ ನೆಲ..ನಮ್ಮ ಜಲ ಬಿಟ್ಟು ಜಾಸ್ತಿ ದಿನ ಇರಕಾಗಲ್ಲ..

  ReplyDelete