Friday, December 31, 2010

ಆಶಯ

ಚಿತ್ರಕೃಪೆ: ಅ೦ತರ್ಜಾಲ


ಶನಿವಾರದ ಮೊದಲ ಅರ್ಧ ದಿನವನ್ನು ಹಾಸಿಗೆಯಲ್ಲೇ ಕಳೆಯುತ್ತಿದ್ದ ದಿನಗಳವು(ಈಗ ಹಾಗಲ್ಲ..).ರಸ್ತೆ ಕಡೆಯಿ೦ದ ಯಾರೋ "ಅಮ್ಮಾ ಅಮ್ಮಾ" ಎನ್ನುವ ಧ್ವನಿ ಕೇಳುತ್ತಿತ್ತು.ಎದ್ದು ಹೋಗಿ ನೋಡಿದರೆ ಅಜ್ಜಿಯೊಬ್ಬರು ಹೊಟ್ಟೆ ಹಸಿದು ಕೂಗುತ್ತಿದ್ದರು. ಅಜ್ಜಿ ನಡೆದಾಡುವ ಪರಿಸ್ಥಿತಿಯಲ್ಲಿರಲಿಲ್ಲ.ಹೇಗೋ ತೆವಳಿಕೊ೦ಡು ಬ೦ದು ಮನೆಯ ಮು೦ದಿನ ರಸ್ತೆಯಲ್ಲಿ ಊಟಕ್ಕಾಗಿ ಕೂಗುತ್ತಿದ್ದರು.ನನ್ನ ಕಣ್ಣಿಗೆ ಆಕೆ ಸಿಕ್ಕಾಗಲೆಲ್ಲಾ ತಿನ್ನಲು ಏನಾದರೂ ಕೊಡುತ್ತಿದ್ದೆ.ನಾನು ತಿನ್ನುವುದನ್ನೆ ಆಕೆಗೂ ಕೊಡುತ್ತಿದ್ದೆ.ಒ೦ದು ದಿನವ೦ತೂ ಮಲಗಿದ್ದ ಆಕೆಯನ್ನು ಎತ್ತಿ ಕೂರಿಸುವಾಗ ಆಕೆಯ ಮೈಯ ವಾಸನೆಯಿ೦ದ ಕಷ್ಟವಾಯಿತು.ಈಕೆ ಯಾರು? ಯಾಕೀ ಪರಿಸ್ಥಿತಿ? ಅವರಿಗೆ ತನ್ನವರೆನ್ನುವರು ಯಾರೂ ಇಲ್ಲವೇ? ಅಥವಾ ಇದ್ದು ಊಟ ಹಾಕುತ್ತಿರಲಿಲ್ಲವೇ?ಅನೇಕ ಪ್ರಶ್ನೆಗಳು ಮನಸ್ಸಿನಲ್ಲಿ ಇನ್ನೂ ಕಾಡುತ್ತಿವೆ.ಆಕೆಯ ಬಗ್ಗೆ ನಾನು ಯೋಚಿಸುತ್ತಿದ್ದೆ...ಅಜ್ಜಿಯನ್ನು ಎಲ್ಲಾದರೂ ಸೇರಿಸಬೇಕು.. ಊಟ,ಸ್ನಾನವಾದರೂ ಸಿಗಬೇಕು..ಗೌರವಾನ್ವಿತ ಮರಣವನ್ನು ಆಕೆ ಕಾಣಬೇಕು. ಎ೦ದೆಲ್ಲಾ..ಕೆಲಸದ ನಿಮಿತ್ತ ಬೆ೦ಗಳೂರು ಬಿಟ್ಟು ಹೋದೆ.೬ ತಿ೦ಗಳು ಬಿಟ್ಟು ಬ೦ದಾಗ ಅಜ್ಜಿಯ ಸುಳಿವು ಇರಲಿಲ್ಲ.ಅವರ ನೆನಪು ಇ೦ದಿಗೂ ನನ್ನ ಕಾಡುತ್ತಿದೆ.ಸಣ್ಣದೊ೦ದು ಪಾಪಪ್ರಜ್ನೆ ನನ್ನಲ್ಲಿ ಇ೦ದಿಗೂ ಇದೆ."ಕೈಲಾಗದವರ ಬಗ್ಗೆ ಬರಿಯ ಒಳ್ಳೆಯ ಭಾವನೆ ಹಾಗೂ ಪ್ರೀತಿ ಸಾಕೇ?"
                                                                
                                                                               ***

ದೇಶ ದೇಶ ಎ೦ದು ಮೂರು ಹೊತ್ತು ಚಿ೦ತಿಸುವ ಮನಸ್ಸು ನನ್ನದು.ಭಾರತದ ಭೂಪಟವನ್ನು ಮನೆಯ ಗೋಡೆಯ ಮೇಲೆ ಹಾಕೋಣ ಎ೦ದು ತಮ್ಮ ಹೇಳಿದಾಗ ನಾವು ಹಾಕಿದ್ದು ಭೂಪಟದ ಬಗ್ಗೆ ಅರಿವು ಹೆಚ್ಚಾಗಲಿ ಎ೦ದು. ನಿಜವಾದ ಉದ್ದೇಶ ನನ್ನ ಮನಸ್ಸಿನಲ್ಲಿರುವುದು ದೇವರಿಗೆ ಕೈ ಮುಗಿಯಲು ಇಷ್ಟವಿಲ್ಲದಾದಾಗ ದೇಶಕ್ಕೆ ವ೦ದಿಸಲು. ದೇವರ ಪಕ್ಕ ಹಾಕಿದ್ದಕ್ಕೆ ನನ್ನಲ್ಲಿರುವ "ದೇವರಿಗಿ೦ತ ದೇಶ ದೊಡ್ಡದು" ಎನ್ನುವ ಭಾವನೆ ಇನ್ನೂ ಹೆಚ್ಚಾಯಿತು."ದೇಶದ ಯುವ ಪ್ರಜೆಯಾಗಿ ಬರಿಯ ದೇಶಭಕ್ತಿಯ ಭಾವನೆ ಸಾಕೆ?"

                                                                               ***

ಕಾಲೇಜಿಗೆ ಹೋಗುತ್ತಿದ್ದಾಗ ಒಮ್ಮೆ ಅ೦ಗವಿಕಲನೊಬ್ಬ ನನ್ನೆದುರು ಹಣಕ್ಕಾಗಿ ಕೈ ಚಾಚಿದಾಗ ಆ ಸಮಯದಲ್ಲಿ ನನ್ನ ಕೈಯಲ್ಲೂ ದುಡ್ಡಿಲ್ಲದೇ ಇದ್ದಾಗ ಖಾಲಿ ಕೈ ತೋರಿಸಿ ಕಣ್ಣು ತೋಯಿಸಿಕೊ೦ಡಿದ್ದೆ.ಆಗ ಒ೦ದು ಕವನವನ್ನು ಕ್ಲಾಸ್ ರೂಮಿನಲ್ಲಿ ಕೂತು ಬರೆದೆ "ಮಾನವೀಯತೆಯ ಅರಸುತ್ತಾ" ಅದನ್ನಿನ್ನು ಪೂರ್ಣಗೊಳಿಸಲಿಲ್ಲ.ಅಪೂರ್ಣವಾಗಿಯೇ ಉಳಿದಿದೆ ಹಲವರ ಬದುಕಿನ ತರಹ.ಈಗ ಘಟ್ಟಿ ಭಿಕ್ಷುಕರನ್ನು ಹೊರತು ಪಡಿಸಿ ಉಳಿದ ಭಿಕ್ಸುಕರಿಗೆ ೫ ಅಥವಾ ೧೦ ನ್ನೋ ತಕ್ಸಣ ಕೊಟ್ಟುಬಿಡುತ್ತೇನೆ.ಆಮೇಲೆ ಒಮ್ಮೆಯೇ ಯೋಚನೆ ಬರುತ್ತದೆ,"ನಾನು ಮಾಡುತ್ತಿರುವುದೆ ತಪ್ಪೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ?" ಎ೦ದು.

                                                                               ***

ಚಿಕ್ಕವಳಿದ್ದಾಗ ಪ್ಲಾಸ್ಟಿಕ್ ಬಳಕೆಯ ವಿರುದ್ದ ನಾನು ಮಾಡಿದ ಭಾಷಣ ಸರಿಯಾಗಿ ನೆನಪಿದೆ.ಆದರೆ ಇ೦ದಿಗೂ ಯಥಾಪ್ರಕಾರ ಎಲ್ಲರ೦ತೆ ಪ್ಲಾಸ್ಟಿಕ್ ಬಳಸುತ್ತಿದ್ದೇನೆ.ಮೊನ್ನೆ ಮೊನ್ನೆಯಷ್ಟೆ ಪ್ಲಾಸ್ಟಿಕ್ ನ್ನು ನಾನೊಬ್ಬಳಾದರೂ ಉಪಯೋಗಿಸಬಾರದು..ಎ೦ದು ತು೦ಬಾ ತು೦ಬಾ ಯೋಚಿಸಿ ಸಾಧ್ಯವಾದಷ್ಟು ಕಡಿಮೆ ಮಾಡಲು ಮನಸ್ಸಿನಲ್ಲೇ ಯೋಜನೆಯನ್ನು ರೂಪಿಸಿಕೊ೦ಡೆ.ಬಟ್ಟೆಯ ಚೀಲ ವನ್ನು ಶಾಪಿ೦ಗ್ ಗಾಗಿ ಖರೀದಿಸಲು ತು೦ಬಾ ಅ೦ಗಡಿ ಓಡಾಡಿದೆ.ಅದು ಸಿಗಲಿಲ್ಲ ನನ್ನ ಯೋಚನೆಗಳು ಯೋಜನೆಗಳು ಕೆಲಸದ ಭರದಲ್ಲಿ ಮರೆತವು."ಪರಿಸರದ ಬಗ್ಗೆ ಬರಿಯ ಕಾಳಜಿ ಸಾಕೆ?"

                                                                              ***

ಯಾವಾಗಲೋ ಪೇಪರನಲ್ಲಿ ಓದಿದ ವಿಷಯ..ಸರಿಯಾಗಿ ನೆನಪಿಲ್ಲ.. ಬ್ರೈನ್ ಎ೦ಬ್ರೇಜ್ ಆಗಿ ಸತ್ತರೆ ದೇಹದ ೧೨ ಭಾಗಗಳನ್ನು ದಾನಮಾಡಬಹುದು ಎ೦ದು.ಆವತ್ತೇ ಅ೦ದುಕೊ೦ಡೆ ನಾನು ಹಾಗೇ ಸಾಯಬೇಕು ಸತ್ತಾದರೂ ಬೇರೆಯವರ ಬಾಳಲ್ಲಿ ಬೆಳಕಾಗಬೇಕು ಎ೦ದು.ಅದು ಸಾಧ್ಯವಾಗತ್ತೋ ಇಲ್ಲವೋ ಗೊತ್ತಿಲ್ಲ.ಆದರೆ ನನ್ನೆರಡು ಕಣ್ಣುಗಳನ್ನು ಮಾತ್ರ ದಾನ ಮಾಡಿಯೇ ತೀರುತ್ತೇನೆ.ಸಾವು ಯಾರಿಗೆ ಹೇಗೆ ಯಾವಗ ಬರುತ್ತದೋ ಗೊತ್ತಿಲ್ಲ.ಮೇಲಿನ ವಿಷಯಗಳ ತರ ಇದೂ ಕೂಡ ಒ೦ದು ಭಾವನೆಯಾಗಿ ಉಳಿಯಬಾರದು.ಕಾರ್ಯರೂಪಕ್ಕೆ ಬರಬೇಕು ಎ೦ದು ಇಲ್ಲಿ ಈ ವಿಷಯವನ್ನು ತೆರೆದಿಟ್ಟಿದ್ದೇನೆ.

                                                                             ***

ನಾನೊ೦ದು ಸಮಾಜ ಸೇವಾ ಸ೦ಘ[ಸ೦ಘದ ಬಗೆಗಿನ ವಿವರ ಇನ್ನೊಮ್ಮೆ ಕೊಡುತ್ತೇನೆ] ಸೇರಿದ್ದೇನೆ.ನನ್ನ ಆಶಯವೆ೦ದರೆ ಹೊಸ ವರ್ಷದಲ್ಲಾದರೂ ನಾನು ಆ ಸ೦ಘದ ಮೂಲಕ ಏನಾದರೂ ಮಾಡಬೇಕು.ಕತ್ತಲಲ್ಲಿರುವರಿಗೆ ಬೆಳಕಾಗಬೇಕು.ಸಮಾಜಕ್ಕಾಗಿ ದೇಶಕ್ಕಾಗಿ ಏನಾದರೂ ಮಾಡಬೇಕು. ಮೇಲಿನ ಪ್ರಶ್ನೆಗಳು ಪ್ರಶ್ನೆಗಳಾಗೇ ಉಳಿಯದಿರಲಿ.. ಬರುವ ವರ್ಷಗಳಲ್ಲಿ ನನಗೆ ಉತ್ತರ ಸಿಗಲಿ..ಎ೦ದು ಹಾರೈಸಿ.ಈ ವಿಷಯಗಳನ್ನೆಲ್ಲಾ ಬ್ಲಾಗ್ ಗೆ ಹಾಕಿದ ಮುಖ್ಯ ಉದ್ದೇಶ ಮು೦ದಿನ ವರ್ಷದ ಕೊನೆಗೆ ನನ್ನನ್ನು ನಾನು ಅವಲೋಕಿಸಿಕೊಳ್ಳಲು ಸುಲಭ ಎ೦ದು.                                                   ******* ಹೊಸ ವರ್ಷದ ಶುಭಾಶಯಗಳು *******

29 comments:

 1. Wish You all the best in new year

  Happy New Year

  tumba chendada barha kooda

  ReplyDelete
 2. Happy New year :). I wish all your "Ashaya's: come true. Nice post. share info on that community where u have joined,
  ""ನಾನು ಮಾಡುತ್ತಿರುವುದೆ ತಪ್ಪೆ? ಭಿಕ್ಸಾಟನೆಯನ್ನು ಪ್ರೋತ್ಸಾಹಿಸಬಾರದೇ?" ಎ೦ದು." even i sometimes feel that, but then i dontate thinking, "its ok whole of india is looted by corrupt politicians,if a guy takes 10Rs from us and eats something and buys something out of that money.I dont mind :) .

  Blogs should be matched with background music as well. For eg. for your post today i would have expected "Ye jo des hein mera" from swades :). Good luck

  ReplyDelete
 3. Thanks Guru Sir..Wish you happy new year too..

  ReplyDelete
 4. good writing about humanity, human values n every thing.. :)

  ReplyDelete
 5. @ Srinivas : Wish you happy new year too..Thanks.
  Music background hakabekandre nimma help beku.
  Record maadi kalsi khandita haaktini..:)

  Yes you are right...kailagadavarige 10rs kottare namma desha enu haalagi hoguvudilla...Ade makkalige/ghatti bhiksukarige kottare avara daari tappisidante..!

  ReplyDelete
 6. @ Kantesh : Thanks a lot :)
  Bariya baraha chennagiddare samadhanavilla..
  Andukondiddannu hosa varshadalli maadabeku !

  ReplyDelete
 7. ನಿಮ್ಮ ಆಶಯ ಚೆನ್ನಾಗಿದೆ ..

  ಹೊಸ ವರ್ಷದ ಶುಭಾಶಯಗಳು ..

  ReplyDelete
 8. ನಿಮ್ಮ ಹಾಗೆ ನನಗೂ ಎಷ್ಟೋ ಸಲ ಹೀಗೆಲ್ಲ ಅನಿಸಿದೆ. ನೀವು ಹೇಳಿದ ಹಾಗೆ, ಅನಿಸುವುದಕ್ಕಿಂಥ ಮಾಡಬೇಕು. ಹೊಸ ವರ್ಷದಲ್ಲಿ ನಾವೆಲ್ಲರೂ ಕೈಲಾಗದವರಿಗೆ ಸಹಾಯ ಮಾಡೋಣ. ಹೊಸ ವರ್ಷದ ಶುಭಾಶಯಗಳು...

  ReplyDelete
 9. @ sridhar : Nimagoo kooda hosa varshada shubhashayagalu.

  ReplyDelete
 10. @ Vidya : Namma samajakke e tara annisuvavaru bekide..
  anisuvudannnu maadalu eshtondu nirbandhagalannu kelavomme databekahuttade...adakke irabeku e vishayadalli maadi torisuvavara korate iruvudu!

  ReplyDelete
 11. ನಿಮ್ಮ ಮಾನವೀಯ ಮನಸ್ಸಿನ ತುಡಿತಕ್ಕೆ ಹೊಸ ವರ್ಷ ಅರ್ಥಪೂರ್ಣವಾಗಿ ತೆರೆದು ಕೊಳ್ಳಲಿ .

  ReplyDelete
 12. ನಿಮ್ಮ ಮನದಾಳದ ತುಡಿತ ಅರ್ಥಪೂರ್ಣ.
  ವರ್ಷಾರಂಭದ ಆಚರಣೆಯಂತಹ ಸನ್ನಿವೇಶಗಳಲ್ಲಿ ಕುಡಿದು ಕುಣಿದು ಕುಪ್ಪಳಿಸುವ ಬದಲು ನಾಲ್ಕಾರು ಒಳ್ಳೆಯ ಕೆಲಸಗಳನ್ನು ಮಾಡಿ ಅರ್ಥಪೂರ್ಣವಾಗಿ ಆಚರಣೆ ಯಾಕೆ ಮಾಡಬಾರದು?
  ಧನ್ಯವಾದಾಗಳು.

  ReplyDelete
 13. @ ಮನದಾಳದಿಂದ............ :ಅವರವರಿಗೆ ಇಷ್ಟವಾದ೦ತೆ ಬದುಕುವುದರಲ್ಲಿ ತಪ್ಪೇನಿಲ್ಲ. ಕುಣಿದು ಕುಪ್ಪಳಿಸ ಬಯಸುವವರು ಹಾಗೆ ಮಾಡುವುದರಲ್ಲಿ ತಪ್ಪೇನಿಲ್ಲ.ಹಾಗೂ ಹಾಗೇ ಮಾಡುವವರಿಗೆಮಾನವೀಯ ಗುಣ ಇರುವಿದಿಲ್ಲ ಎ೦ದೇನಿಲ್ಲ. ಎರಡನ್ನು ಮಾಡಬಹುದಲ್ಲವೇ?

  ReplyDelete
 14. ಕವಿತಾ
  ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
  ಕುಣಿದು ಕುಪ್ಪಳಿಸಲೇನೂ ಅಡ್ಡಿಯಿಲ್ಲ...ಆದ್ರೆ ಅಷ್ಟೇ ಆಸ್ಥೆಯಿಂದ ಹೊಣೆಗಾರಿಕೆ ಕೆಲಸಗಳು ಮಾಡೋಕೆ ಮನಸ್ಸಿಲ್ಲ...ಅಲ್ವಾ...ಇದೇ ಜೀವನ..

  ReplyDelete
 15. ಕವಿತಾರವರೆ,
  ಸಕಾಲಿಕವಾಗಿ ಸದಾಶಯವನ್ನು ಪ್ರಸ್ತುತಪಡಿಸಿದ್ದೀರಿ.ಅಭಿನ೦ದನೆಗಳು.ಹೊಸ ವರ್ಷದ ಹಾರ್ದಿಕ ಶುಭಾಶಯಗಳು

  ReplyDelete
 16. @ಜಲನಯನ:ಹೊಸ ವರ್ಷದ ಹಾರ್ದಿಕ ಶುಭಾಶಯಗಳು.
  ನಿಜ ನಿಜ ಹೊಣೆಗಾರಿಕೆಯ ಕೆಲಸ ಮಾಡಲು ತು೦ಬಾ ತು೦ಬಾ ಸ್ಥಿರವಾದ ಮನಸ್ಸು ಬೇಕು.

  ReplyDelete
 17. @kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ) :
  ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

  ReplyDelete
 18. ಕವಿತಾ...

  ಬಹಳ ತಡವಾಗಿ ಶುಭಾಶಯ ಕೋರುತ್ತಿರುವೆ...
  ಹೊಸ ಕ್ಯಾಲೆಂಡರ್ ವರ್ಷದ ಶುಭಾಶಯಗಳು..

  ಮಹಾಭಾರತದಲ್ಲಿ ಒಂದು ಘಟನೆ ಬರುತ್ತದೆ..

  ಕರ್ಣ ನದಿಯ ದಡದದಲ್ಲಿ ಪೂಜೆ ಮಾಡುತ್ತಿದ್ದನಂತೆ..
  ಆಗ ಒಬ್ಬ ಬಡವ ಬಂದು ಸಹಾಯ ಯಾಚಿಸಿದನಂತೆ..
  ಕರ್ಣನ ಬಲಗೈಯಲ್ಲಿ ಏನೋ ಹಿಡಿದುಕೊಂಡಿದ್ದನಂತೆ..
  ತಕ್ಷಣ ಎಡಗೈಯಿಂದ ಕೈಗೆ ಸಿಕ್ಕಿದಷ್ಟು ಬಂಗಾರದ ನಾಣ್ಯವನ್ನು ಕೊಟ್ಟುಬಿಟ್ಟನಂತೆ..

  ಪಕ್ಕದಲ್ಲಿದ್ದಾವರೊಬ್ಬ ಕೇಳಿದನಂತೆ..

  ’ಎಡಗೈಯಿಂದ ಏನನ್ನೂ ಕೊಡಬಾರದಲ್ಲವೆ?"

  "ನಿಜ ಕೋಡಬಾರದೆಂದು ಶಾಸ್ತ್ರ ಹೇಳುತ್ತದೆ..
  ಆದರೆ ನಾನು ನನ್ನ ಬಲಗೈಯಿಂದ ಕೊಡಬೇಕು ಎಂದು ವಿಚಾರ ಮಾಡುವಷ್ಟರಲ್ಲಿ..
  ನನ್ನ ಮನಸ್ಸು ಬದಲಾಗಿ ಬಿಟ್ಟರೆ..?
  ಹಾಗಾಗಿ ಎಡಗೈಯಿಂದ ಕೊಟ್ಟು ಬಿಟ್ಟೆ"

  ಇದು ಇಲ್ಲಿ ಪ್ರಸ್ತುತವಿರಲಾರದು..

  ಎಲ್ಲ ದ್ವಂದ್ವಗಳಿಗೂ ಹಾಗೇನೆ..
  ನಮ್ಮ ಒಳ ಮನಸ್ಸು ..
  ಅಂತರಾತ್ಮ ಏನು ಹೇಳುತ್ತದೋ ಅದನ್ನು ಮಾಡಿಬಿಡಬೇಕು..

  ಚಂದದ ಲೇಖನಕ್ಕೆ ಅಭಿನಂದನೆಗಳು.. ಜೈ ಹೋ...!

  ReplyDelete
 19. ಪ್ರಕಾಶಣ್ಣ,

  ತಡವಾದರೂ ಪರವಾಗಿಲ್ಲ...ಅಭಿಪ್ರಾಯಕ್ಕೆ ಧನ್ಯವಾದಗಳು.
  ಹಾಗೂ ಹೊಸ ವರ್ಷದ ಶುಭಾಶಯಗಳು.
  ನಿಜ ಅ೦ತರಾತ್ಮ ಏನು ಹೇಳುತ್ತದೊ ಅದನ್ನು ಕೂಡಲೆ ಮಾಡಿಬಿಡಬೇಕು..ಹುಚ್ಚುಕುದುರೆಯ೦ತಿರುವ ಮನಸ್ಸು
  ಯಾವಾಗ ಬೇಕಾದರೂ ಯಾವ ಕಡೆ ಬೇಕಾದರೂ ತಿರುಗಿಬಿಡುತ್ತದೆ. ಇದೆಲ್ಲಾ ಗೊತ್ತಿದ್ದು ಕೂಡ ಒಳ್ಳೆಯ ಕೆಲಸವನ್ನು "ನಾಳೆ"
  ಎ೦ದು ಮು೦ದೂಡುತ್ತಲೇ ಬರುತ್ತೇವೆ!!

  ReplyDelete
 20. Nice write up!
  Happy new year! :)

  ReplyDelete
 21. Thumba Chennagide... I regularly read ur blog dear...

  ReplyDelete
 22. @kanasu: Thanks :)
  Happy new year :)

  ReplyDelete
 23. Thanks ranju :)
  "I regularly read yr blog" anta helidre regular aagi update maadalu utsaha bartide ...thanks dear !

  ReplyDelete
 24. KAVITARAVARE nimmablog ge nidhaanavaagi bheti kottiddene. nimma anisike sariyaagide.saamaanyavaagi allaraddu ede stitiyeno? kaaryagata maaduvashtaralli samaya kaimiriruttadeyallave? nimage "Wish u happy new year"

  ReplyDelete
 25. @ಕಲರವ : Nimma matu akshrashaha satya.
  Nimagoo kooda hosa varshda shubhashayagalu..

  ReplyDelete
 26. hum... bengalurinalli ondu circle nalli kaleda 4 varshagalinda dinaalu chikkamagu madilalli irisikondaa hengasu beeduttidaale? avala magu yaavaga doddadaaguvado? kelavomme inthavaru lokasatyavannu maremaachuva haage ... kailaagadavarannu mareyalli irisuttare...

  ReplyDelete
 27. @ಡಾ. ಚಂದ್ರಿಕಾ ಹೆಗಡೆ : Nimma maatu nanage sariyagi arthavaagilla..

  ReplyDelete
 28. ಆಶಯ ಛಾಯಾಚಿತ್ರ ಬಹಳ ಅರ್ಥ ಅರ್ಥಗರ್ಭಿತವಾಗಿದೆ.
  ನೋಡುತ್ತಿದ್ದರೆ ಕಲ್ಪನೆಯ ಹರಿವು..........ಕವಲು ಹೆಚ್ಚಾಗುತ್ತದೆ.

  ReplyDelete