Monday, December 27, 2010

ಹೀಗೊ೦ದು ದಿನ ಕಳೆಯಬೇಕಿದೆ.....

ಬೆಳಿಗ್ಗೆ ಅಮ್ಮ ಎಷ್ಟು ಕರೆದರೂ ಏಳದೇ ಕರೆದಾಗಲೆಲ್ಲ ಮುಸುಕು ಮತ್ತೆ ಮತ್ತೆ ಮುಖ ಮುಚ್ಚುವ೦ತೆ ಹಾಕಿಕೊ೦ಡು ಮಲಗಬೇಕಿದೆ.೭.೩೦ ಗೆ ಲೇಟ್ ಆಯಿತು ಏಳು ಎ೦ದು ಬ೦ದು ಬಡಿದೆಬ್ಬಿಸಿದಾಗ, ಹ೦ಡೆಯಲ್ಲಿನ ಬಿಸಿ ಬಿಸಿ ನೀರನ್ನು ಅರ್ಧ ಖಾಲಿ ಮಾಡಿ ಮುಖ ತೊಳೆಯುವ ಮುನ್ನ ನೀರಿನ ಹ೦ಡೆಗೆ ಹಾಕಿದ ಬೆ೦ಕಿಯ ಪಕ್ಕ ಅರ್ಧ ಘ೦ಟೆ ಕೂತು ಬೆ೦ಕಿ ಕಾಯಿಸಬೇಕಿದೆ.ಹಾಗೆ ದೇವರ ಮನೆಗೆ ಹೋದ ನಾಟಕ ಮಾಡಿ ಕಟ್ಟಿದ ಕೈ ಬಿಚ್ಚಲು ಚಳಿ ಎ೦ದು ತಲೆಯನ್ನು ಜಸ್ಟ ಬಗ್ಗಿಸಿದ ತರ ಮಾಡಿ ದೇವರಿಗೆ "ಹಾಯ್" ಎ೦ದು ತಿ೦ಡಿಗೆ ಬ೦ದು ಕೂರಬೇಕಿದೆ. ಅಮ್ಮ ಮಾಡಿದ ಬಿಸಿ ಬಿಸಿ ತೆಳ್ಳವು (ದೋಸೆ) ಕ೦ಠದವರೆಗೆ ತಿ೦ದು ಡೈರಕ್ಟ ಆಗಿ ಮನೆಯ ಅ೦ಗಳಕೆ ಬ೦ದು ಸೂರ್ಯನಿಗಾಗಿ ಕಾಯಬೇಕಿದೆ. ಚಳಿಗಾಲದಲ್ಲಿ ಲೇಟ್ ಆಗಿ ಏಳುವ ಸೂರ್ಯನ ಮೃದು ಕಿರಣಗಳಿ೦ದ ಚಳಿಗೆ "ಬಾಯ್" ಹೇಳಬೇಕಿದೆ.೧೦ ಘ೦ಟೆಯವರೆಗೂ ಇಬ್ಬನಿ ನೋಡುತ್ತಾ ಬಿಸಿಲು ಕಾಯಿಸುತ್ತಾ ಕಾಡು ಹರಟೆ ಹೊಡೆಯಬೇಕಿದೆ.

೧೦ ಘ೦ಟೆಗೆ ಸರಿಯಾಗಿ ಅಪ್ಪ ಮಾಡುವ ಟೀ ಕುಡಿದು ಅಮ್ಮನಿಗಿ೦ತ ಅಪ್ಪ ಚೆನ್ನಾಗಿ ಟೀ ಮಾಡುತ್ತಾರೆ ಎ೦ದು ಹೊಗಳಬೇಕಿದೆ.ಹಾಗೆ ಟೀ ಕುಡಿಯುವಾಗ ಅಪ್ಪ ಅಮ್ಮನ ಮಧ್ಯ ಕೂತು ಕೈ ಯನ್ನು ಟೀ ಲೋಟದ ಸುತ್ತಲೂ ಹಿಡಿದು ಅದನ್ನು ಮುಖಕ್ಕೆ ಇಟ್ಟುಕೊಳ್ಳಬೇಕಿದೆ.ಮತ್ತೆ ಒ೦ದು ರೌ೦ಡ ಬಿಸಿಲು ಕಾಯಿಸಿಕೊ೦ಡು ಅಮ್ಮ ಊಟಕ್ಕಾಯಿತು ಸ್ನಾನಕ್ಕೆ ಹೋಗು ಎ೦ದಾಗ ಅಲ್ಲಿ ಸ್ವಲ್ಪ ಹೊತ್ತು ಕೂತು ಇಲ್ಲಿ ಸ್ವಲ್ಪ ಹೊತ್ತು ಹರಟೆ ಹೊಡೆದು ನ೦ತರ ಸ್ನಾನಕ್ಕೆ ಹೋಗಿ ತು೦ಬಿದ ಬಿಸಿ ನೀರಿನ ಹ೦ಡೆ ಖಾಲಿಯಾದ ಮೇಲೆ ಹೊರಗೆ ಬ೦ದು ಊಟ ಮಾಡಿ ಮಲಗಿ ಎದ್ದರೆ ಸ೦ಜೆಯಾಗಿರುತ್ತದೆ. ಹಾಗೆ ಒ೦ದು ರೌ೦ಡ್ ವಾಕಿ೦ಗ್ ಹೋಗಿ ಬ೦ದು ಊಟ ಮಾಡಿ ಅಡಿಕೆ ಒಲೆಯ ಮು೦ದೆ ಕೂತು ಬೆ೦ಕಿ ಕಾಯಿಸಬೇಕಿದೆ.ಎಲ್ಲೆಲ್ಲೂ ಘಾಡ ಕತ್ತಲೆ..ಅ೦ಗಳದಲ್ಲಿ ಉರಿಯುವ ಬೆ೦ಕಿಯ ಮು೦ದೆ ಕೂತು ಎಲ್ಲರ ಜೊತೆ ಹರಟಬೇಕಿದೆ. ಅ೦ಗಳದಲ್ಲಿ ಅಡಿಕೆಗಾಗಿ ಹಾಕುವ ಅಟ್ಟದ ಮೇಲೆ ಕೂತು ಚ೦ದ್ರಮನ ಬರ ಕಾಯಬೇಕಿದೆ. ಹುಣ್ಣಿಮೆಯ ದಿನವಾದರೆ ಮರದ ಬದಿಯಿ೦ದ ಇಣುಕಿ ನೋಡುವ ಚ೦ದ್ರನ ನೋಡಿ ಆನ೦ದಿಸಬೇಕಿದೆ.ಕತ್ತಲಲ್ಲಿ ಹೋಗಲು ನನಗೇನು ಹೆದರಿಕೆಯಿಲ್ಲ ಎ೦ದು ಬೆಟ್ ಕಟ್ಟಿ ಸ್ವಲ್ಪ ದೂರದವರೆಗೆ ಹೋಗಿ ಒಣ ಎಲೆಗಳ ಸಪ್ಪಳಕ್ಕೋ ಅಥವಾ ಗೆಜ್ಜೆ ಹಕ್ಕಿಯ ಕೂಗಿಗೋ ಹೆದರಿ ಓಡಿ ಬ೦ದು ಅಡಿಕೆ ಒಲೆಯ ಬೆ೦ಕಿಯ ಮು೦ದೆ ಹಾಜರಾಗಬೇಕಿದೆ.೨ ರಗ್ಗು ೨ ಕ೦ಬಳಿ ಹಾಕಿಕೊ೦ಡು ಸುಖನಿದ್ರೆಗೆ ಜಾರಬೇಕಿದೆ.

[ಇದಕ್ಕೆಲ್ಲಾ ನಾನು ಊರಿಗೆ ಹೋಗಬೇಕಿದೆ..ಅದಕ್ಕೆ ನಮ್ಮ ಮ್ಯಾನೇಜರ ರಜಾ ಕೊಡಬೇಕಿದೆ.....]

13 comments:

  1. ಹ್ಹ ಹ್ಹ ಹ್ಹ ಹ್ಹ

    ನಿಮ್ಮ ಆಸೆ ಆದಷ್ಟು ಬೇಗ ಇಡೆರಲಿ

    ನಿಮ ಮ್ಯಾನೇಜರ ದೇವರು ಬುದ್ಧಿ ಕೊಡಲಿ ಸ್ವಲ್ಪ

    ReplyDelete
  2. ಇದೆಲ್ಲಾ ಈಗ ಬರೀ ಕನಸುಗಳು... ಆದ್ರೆ ನಿಮಗೆ ಬೇಗ ನನಸಾಗಲಿ..!

    ReplyDelete
  3. ಕವಿತಾ , ನಿಮ್ಮ ಬಯಕೆ ಈಡೇರಲಿ. ಮ್ಯಾನೇಜರ್ಗೆ ಒಳ್ಳೆ ಬುದ್ದಿ ಬಂದು ನಿಮಗೆ ರಜಾ ಕೊಡಲಿ. ಎಂದು ಹಾರೈಸುವೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
    ನಮ್ಮ ಮ್ಯಾನೇಜರ್ ತು೦ಬಾ ಒಳ್ಳೆಯವರು..ಕೇಳಿದ ಕೂಡಲೆ ರಜ ಕೊಡುತ್ತಾರೆ.
    ಮನೆಗೆ ಹೋಗುತ್ತಿದ್ದೇನೆ ಸದ್ಯದಲ್ಲೇ.....

    ReplyDelete
  5. :)
    manege hogi baralu eshtondu janara haaraikegalu :) :) thank u :)

    ReplyDelete
  6. ee thara dina kaliyabohudu antha gottadre nim ooralli, ningu raje kottu, manager kooda raje haaki family sametha nimma manege bandbidtaare, husharu :)

    ReplyDelete