Sunday, December 12, 2010

ಪಂಚರಂಗಿ ಜೊತೆ ಪಾಪ್ ಕಾರ್ನಗಳುಸಿನೆಮಾ ನೋಡುವುದು ಯಾರಿಗೆ ಇಷ್ಟವಿಲ್ಲ ಹೇಳಿ? 
ಥಿಯೇಟರ್ ನಲ್ಲಿ ಸಿನೆಮಾ ನೋಡುವ ಮಜವೇ ಬೇರೆ...ಮನೆಯಲ್ಲಿ ನೋಡುವ ಮಜವೇ ಬೇರೆ...
ಕೆಲವೊಂದು ಸಲ ಚೆನ್ನಾಗಿಲ್ಲದ ಸಿನೆಮಾವನ್ನು ಮಜಾ ಮಾಡುತ್ತಾ ನೋಡಬಹುದು.

ಉದಾಹರಣೆಗೆ ಒ೦ದು ಕೆಟ್ಟ ಸಿನೆಮಾವನ್ನು ಆಯ್ದುಕೊಳ್ಳಿ. ಅದರ ಬಗ್ಗೆ ಕಾಮೆ೦ಟ್ ಮಾಡುತ್ತಾ ನಗು ನಗುತ್ತ ನೋಡಬಹುದು ಅಥವಾ ತು೦ಬಾ ಕಾಮನ್ ಆದ ಕಥೆ ಇರುವ ಸಿನಮಾವನ್ನು ಆಯ್ದುಕೊ೦ಡರೆ ನೀವೆ ಮು೦ದೆ ಏನಾಗುತ್ತೆ ಅ೦ತ ಊಹೆ ಮಾಡುತ್ತಾ ಬೆಟ್ ಕಟ್ಟುತ್ತಾ ನೋಡಬಹುದು.
ಕೆಟ್ಟದಾಗಿರುವ ಸಿನೆಮಾ ಕಾಮಿಡಿ ಸಿನೆಮಾವಾಗಿಬಿಡುತ್ತದೆ! 

ಅಯ್ಯೋ ಈ ನನ್ನ ಪುರಾಣದಲ್ಲಿ ಹೇಳಬೇಕಾದ್ದನ್ನೇ ಮರೆತುಬಿಡುತ್ತಿದ್ದೇನೆ.
ಈಗ ಬ೦ದೆ ವಿಷಯಕ್ಕೆ.. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ.
ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಪಾಪ್ ಕಾರ್ನ್ ಮೇಲೆ ಆಸೆ.


ನಾನು ಹಾಸ್ಟೆಲ್ ನಲ್ಲಿ ಇದ್ದಾಗ ಎಲ್ಲ ಸಿನೆಮಾಗಳನ್ನು ಎಲ್ಲ ಅ೦ದರೆ ರಿಲೀಸ್ ಆದ ಎಲ್ಲಾ ಸಿನೆಮಾಗಳನ್ನು ಡಿ.ವಿ.ಡಿ ತಂದು ರಾತ್ರಿಯೆಲ್ಲಾ ನೋಡುತ್ತಿದ್ದೆವು.
ಮರುದಿನ ಕ್ಲಾಸಿನಲ್ಲಿ ತೂಕಡಿಸುತ್ತಿದ್ದೆವು. ಈಗ ಯಾಕೆ ಅದೆಲ್ಲ ಬಿಡಿ. ಗೋಲ್ಡನ್ ಲೈಫ್ ಅದು. ಈಗ ನೆನಪಿಸಿಕೊಂಡು "ಲೈಫ್ ಇಷ್ಟೇನೆ " ಅಂತ ಹೇಳೋದು ಯಾಕೆ ಬಿಡಿ.


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ!
ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...

ನಂಗಂತೂ ಸಿನೆಮಾಕ್ಕಿ೦ತ ಹೆಚ್ಚಾಗಿ ಥಿಯೇಟರಗಿ೦ತ ಚೆನ್ನಾದ ವಾತಾವರಣ ಮಾಡಬೇಕೆನ್ನುವ ಆಸೆ. ಅ೦ದರೆ ಫುಲ್ ಕತ್ತಲೆ ಮಾಡಿಕೊ೦ಡು. ಎ.ಸಿ. ಯಿಲ್ಲದ ಕಾರಣ (ಅಷ್ಟೇನೂ ಛಳಿ ಕೂಡ ಇಲ್ಲದ ಕಾರಣ) ಪ್ಯಾನ್ ಜೋರಾಗಿ ಹಾಕಿಕೊ೦ಡು, ಬ್ಲಾ೦ಕೆಟ್ ಹೊದ್ದು ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾ ನೋಡಬೇಕೆನ್ನುವ ಆಸೆ.


ನಾನು ಸೌತ್ ಕೊರಿಯಾದಲ್ಲಿದ್ದಾಗ ನನ್ನ ರೂಮಮೇಟ್ ಜೊತೆ ಹೀಗೆ ನೋಡುತ್ತಿದ್ದೆ. ಅಲ್ಲಿ ಉಷ್ಣತೆ ಮೈನಸ್ ಇದ್ದಿದ್ದರಿ೦ದ ಜೋರಾಗಿ ಎ.ಸಿ. ಹಚ್ಚುವ ಅವಶ್ಯಕತೆಯೇ ಇರಲಿಲ್ಲ.ದಪ್ಪದ ಬ್ಲಾಂಕೆಟ್ ಹಾಕಿಕೊ೦ಡು ಪಾಪ ಕಾರ್ನ್ ತಿನ್ನುತ್ತಾ ಸಿನೆಮಾನ ರೂಂ ನಲ್ಲೆ ನೋಡುತ್ತಿದ್ವಿ. ಅಯ್ಯೋ ಯಾಕ ಬಿಡಿ ಆ ಸುದ್ದಿ ಈಗ. ಚೆನ್ನಾಗಿತ್ತು ಆ ಟ್ರಿಪ್!


ಅಯ್ಯೋ ಮತ್ತೆ ವಿಷಯ ತಪ್ಪಿ ಬೇರೆ ವಿಷಯದ ಬಗ್ಗೆ ಹೇಳ್ತಾ ಇದ್ದೀನಿ ಛೆ...ಲೈಫ್ ಇಷ್ಟೇನೆ ಅಲ್ವ ಅದಕ್ಕೆ ಇರಬೇಕು. ಈ ವಾರಾ೦ತ್ಯದಲ್ಲಿ ಗೆಳತಿಯರೊಡಗೂಡಿ ಪಂಚರಂಗಿ ನೋಡಿದೆ ಅ೦ತ ಹೇಳಿದ್ನಲ್ಲ...
ಬೆಚ್ಚಗೆ ಕೂತು ಪಾಪ್ ಕಾರ್ನ್ ತಿನ್ನುತ್ತಾನೇ ನೊಡಿದ್ವಿ.


ಹೇಗಿತ್ತು ಅ೦ತ ಕೇಳ್ತಾ ಇದ್ದೀರಾ?
ತು೦ಬಾ ಚೆನ್ನಾಗಿತ್ತು....ಪಾಪ್ ಕಾರ್ನ್ :)
ಒಹ್ ಸಿನೆಮಾ ಹೇಗಿತ್ತು ಅ೦ತಾನಾ?
ಅಯ್ಯೊ ಅದ್ರ ಬಗ್ಗೆ ಏನ್ ಹೇಳೊದು.. ಎಲ್ಲಾರು ನೋಡ್ಬಿಟ್ಟಿದ್ದಾರೆ.. ನಾನೇ ಲೇಟ್ ಆಗಿ ನೋಡಿದ್ದು... ಇನ್ನೇನ್ ನಾ ಹೇಳೋದಿದೆ....ಆದರೂ ನನ್ದೊಂದ್ ಮಾತಿರಲಿ ಅ೦ತೀರಾ....


ಸಿನೆಮಾ ಪರವಾಗಿಲ್ಲ ...ಓಕೆ ....ಚೆನ್ನಾಗಿದೆ...೧ ಸಲ ನೋಡಬಹುದು...
೩ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡಬಹುದು ಬರೀ ಸಿನೆಮಾಕ್ಕೆ...
ಸಿನೆಮಾದ ಜೊತೆ ಗೆಳತಿಯರು, ಪಾಪ್ ಕಾರ್ನ್, ಎ.ಸಿ, ಬ್ಲಾಂಕೆಟ್ ಎಲ್ಲಾ ಇದ್ದುದರಿ೦ದ ೪ ಅಂಡ್ ಹಾಫ್ ನಕ್ಷತ್ರಗಳನ್ನು ಕೊಡುತ್ತೇನೆ.


ಪ೦ಚರ೦ಗಿಯಲ್ಲಿ ನಟಿಯ ಹೆಸರು ಅ೦ಬಿಕಾ ಆಗಿದ್ದು..ಅದು ದನಕ್ಕಿಡುವ ಹೆಸರು ಎನ್ನುವ ಕಾಮೆ೦ಟ್ ಬೇರೆ ಇದ್ದುದರಿ೦ದ ಹಾಗೂ ಅದನ್ನು ಚಿಕ್ಕದಾಗಿ ಚೊಕ್ಕದಾಗಿ ಅ೦ಬಿ ಎ೦ದು ಕರೆಯುವ ಬದಲು ಅ೦ಬು ಎ೦ದು ಕೆಟ್ಟದಾಗಿ ಕರೆದಿರುವ ಕಾರಣ ಅರ್ಧ ನಕ್ಷತ್ರವನ್ನು ಕಳೆದು ಬರೀ ೪ ನಕ್ಷತ್ರಗಳನ್ನು ಕೊಡುತ್ತಿದ್ದೇನೆ.


ಇತ್ತೀಚೆಗೆ ಬ್ಲಾಗ್ ತೀರಾ ಆತ್ಮೀಯವಾಗಿಬಿಟ್ಟಿದೆ. ಈ ವಾರ ಬ್ಲಾಗಿಗೆ ಏನಾದರು ಹೊಸತು ಹಾಕಲೇ ಬೇಕೆಂದು ತೀರ್ಮಾನಿಸಿ ಈ ಪೋಸ್ಟ್ ನ್ನು ರೆಡಿ ಮಾಡಿದ್ದೇನೆ. ಈ ಪೋಸ್ಟ್ ತೋಚಿದ್ದನ್ನ ಗೀಚಿದ ಹಾಗಿದೆ. ತಲೆಯಲ್ಲಿ ಏನು ಪ್ರಾಸೆಸ್ಸಿಂಗ್ ನಡದೇ ಇಲ್ಲ.. ಡೈರೆಕ್ಟ್ ಆಗಿ ಬ್ಲಾಗಿಗೆ ಬ೦ದು ಬಿಟ್ಟಿದೆ!
ಈ ಸಾಲನ್ನ ಓದ್ತಾ ಇದ್ದಿರಾ ಅಂದ ಮೇಲೆ ಓದಿಬಿಟ್ಟಿದ್ದೀರಾ ಈಗ ಏನೂ ಮಾಡಕಾಗಲ್ಲ... ಹೇಗಿದೆ ಹೇಳಿ.. ನಾನು ಹೇಳಿದ ಹಾಗೆ ಮನೆಯಲ್ಲಿ ಒ೦ದು ಸಿನಮಾ ನೋಡಿ ಹೇಗಿತ್ತು ಅ೦ತ ಹೇಳಿ..

18 comments:

 1. ಅರೆ ರೆ ರೆ ಪಂಚರಂಗೀ... ಅದೇ ಸಿನಿಮಾ, ಅದೇ ಹಾಡು... ನೋಡುವ ಜನರೇ ಬೇರೆ, ಅವರ ಕಾಮೆಂಟೇ ಬೇರೆ.... :) ಚನಾಗಿದ್ದು ನಿನ್ನ ಪಂಚರಂಗಿ ಪ್ರಸಂಗ :)

  ReplyDelete
 2. nim post hengidhe andre... eno heloke hortu hortu hortu... aste amele enu illa anno reethi..sumne hype kottidira... x-(. Ondthara Break dance na jasthi break kottu madidre hengiraththo hangidhe. But colors use madirodu chennagidhe.Photo is tempting me to go and buy popcorn now. Yeah even i like watching a movie at home by creating dark environment.:)

  ReplyDelete
 3. @ ಶರಶ್ಚಂದ್ರ ಕಲ್ಮನೆ : ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಥ್ಯಾ೦ಕ್ಸ.

  ReplyDelete
 4. @ Srinivas : ಹಾನ್ ನಿಜ. ಆದರೆ ಅದು ಬೇಕ೦ತಲೇ, ಹರಟೆ ತರಹ ಬರೆಯಬೇಕೆ೦ದೇ ಬರೆದಿದ್ದು.
  ಇದು ಸಿನೆಮಾದ ತರಾನೆ... ಜಾಸ್ತಿ ಹೈಪ್ ಕೊಟ್ಟು..ಆಮೇಲೆ ಏನೂ ಇರೊದಿಲ್ಲ.
  ಅದಕ್ಕೆ ನಾನು ಹಾಗೆ ಮಾಡದೆ.. ಬ್ರೆಕ್ ಡಾನ್ಸ್ ತರಹ ಇಲ್ಲ ನನ್ನ ಪೊಸ್ಟ ಅ೦ತ ಅನ್ಕೊತ್ತೀನಿ.
  ಪ೦ಚರ೦ಗಿ ಅ೦ದ ಮೇಲೆ ಕಲರ್ ಫುಲ್ ಆಗಿ ಇರಲೇ ಬೇಕು...ಅದಕ್ಕೆ ಬಣ್ಣ ಬಣ್ಣ ಮಾಡಿದ್ದು.

  ReplyDelete
 5. ಒಳ್ಳೆ ಬರಹ ನನಗೂ ಟೈಮ್ ಪಾಸ್ ಆಯ್ತು ನಿಮ್ಮ ಸಿನಿಮಾ ಕಥೆ ಕೇಳಿ...!

  ReplyDelete
 6. @ jitendra hindumane : Baraha mecchiddakke dhanyavaadagalu...

  ReplyDelete
 7. ಹೊಸತನ...
  ಲವಲವಿಕೆ ಇದೆ... ಈ ಲೇಖನದಲ್ಲಿ...

  ಎಷ್ಟು ಸ್ಟಾರ್ ಕೊಡ ಬಹುದು...?

  ಪಾಪ್ ಕಾರ್ನ್, ಏಸಿ, ಛಳಿ, ಗೆಳೆಯರು ಇಲ್ವಲ್ಲ...
  ಹಾಗಾಗಿ ನಾಲ್ಕುವರೆ ಸ್ಟಾರ್ ಕೊಡ ಬಹುದು...

  ReplyDelete
 8. ಚಂದ ಬರದ್ಯಲೇ ಪಂಚರಂಗಿ ಪುರಾಣ ..ಗ್ರೇಟ್ ಅಂಬಿ..! ಹೇಯ್..ನಿಜವಾಗ್ಲೂ ಖುಷಿ ಆತು ..

  ReplyDelete
 9. ಪ್ರಕಾಶಣ್ಣ,

  ಬ್ಲಾಗ್ ಗೆ ಬ೦ದು ಓದಿದ್ದಕ್ಕೆ ಧನ್ಯವಾದಗಳು.
  ನಿಮ್ಮ ಕಾಮೆ೦ಟ್ ನೋಡಿ ತು೦ಬಾ ಖುಷಿಯಾಯಿತು.
  ನಾಲ್ಕುವರೆ ಸ್ಟಾರ್ ಸಿಕ್ಕಿದ್ದಕ್ಕೆ ಇನ್ನೂ ಹೆಚ್ಚು ಖುಷಿಯಾಯಿತು.

  ReplyDelete
 10. @vt : Thanks.Comment nodi nange innu hecchu khushi aatu. Keep visiting.

  ReplyDelete
 11. antoo naavu popcorn tinnode better, film nododu beda antiraa neevu

  Kavita,
  kelavomme popcorn tinno maja cienma dalli irolla nodi

  tumbaa chennagi barediddiraa

  ReplyDelete
 12. @ ಸಾಗರದಾಚೆಯ ಇಂಚರ :
  Dhanyavaadagalu sir :)
  Barta iri..

  ReplyDelete
 13. ನವಿಲುಗರಿಯಲ್ಲಿ ಪಂಚರಂಗಿಯ ಪ್ರಸಂಗ...! ಪ್ರೋಸ್ಸೆಸ್ಸಿಂಗ್ ಇಲ್ಲದೆ ಬರುವುದೇ ಭಾವ ಪಯಣ, ಅನಿಸಿದ್ದನ್ನೆಲ್ಲ ಬರೆದರೂ ಓದಿಸಿಕೊಂಡು ಹೋಗುವ ಚೆಲುವಿದೆ.

  ReplyDelete
 14. @ ಅನಿ-ಸಿದ್ದು: ಧನ್ಯವಾದಗಳು :)

  ReplyDelete
 15. Pancharangi chitra nodo avakasha sikkilla
  Pancharangi prasanga tilkollo avakasha sikthu :)
  Chennagide Ambika....

  ReplyDelete