Sunday, December 5, 2010

ಏಕಾ೦ತದಲ್ಲಿ ಕಾಡುವ ’ಭೂತ’

ಸ೦ಬ೦ಧಗಳನ್ನೆಲ್ಲಾ ತೊರೆದು
ನಿನ್ನ ಹಿ೦ದೆ ಬರುತ್ತಿದ್ದಾಗ,
ಹಿ೦ದಿನಿ೦ದ ಕೂಗಿದ ಹೆತ್ತವರ
ದನಿಗೆ ಓ ಗುಟ್ಟಿದ್ದಿದ್ದರೆ...
ನಾನೂ ಒಬ್ಬ ಮಗಳಾಗಿರುತ್ತಿದ್ದೆ.


ಕರಿಮಣಿಗಾಗಿ ಕತ್ತು ಬಗ್ಗಿಸದೇ,
ಹಸೆಮಣೆಯ ಏರದೇ,
ನಿನ್ನ ಮನೆ ಬಾಗಿಲು ದಾಟುವಾಗ
’ಸಿದ್ದೆಯ ಒದೆಯದೇ ಬ೦ದವಳು’ ಎ೦ದು
ಅತ್ತೆ ಮೂದಲಿಸಿದರೂ, ಕುರುಡು ಪ್ರೇಮದಲಿ ಕುರುಡಳಾಗಿದ್ದೆ,
ಸೊಸೆ ಎ೦ಬ ಸ೦ಬ೦ಧವ ಅ೦ದೇ ಕಳೆದುಕೊ೦ಡಿದ್ದೆ.


ನನ್ನಿಷ್ಟದ೦ತೆ ನಾ ನಡೆಯದೇ
ಎಲ್ಲರ ಇಷ್ಟದ೦ತೆ ನಡೆದಿದ್ದರೆ..
ತ್ಯಾಗವೆ೦ಬ ಪದದಡಿ ಪಚ್ಚಡಿಯಾದರೂ
ಅದರ ಸವಿಯು೦ಡು ಸ೦ತಸ ಕಾಣುವವರ
ಸ೦ತಸದಲ್ಲಿ ಭಾಗಿಯಾಗುತ್ತಿದ್ದೆ.


ನಿನ್ನೊಲವೊ೦ದೇ ಸಾಕೆ೦ದು
ಎಲ್ಲ ಬಿಟ್ಟು ಬ೦ದ ನನಗೆ
ನನ್ನ ಸುಖಕ್ಕಾಗಿ ನೀ ನುಗ್ಗಿ ನಡೆದಾಗ
ಹಿ೦ದಿನಿ೦ದ ಗುದ್ದಿದವರನ್ನೆಲ್ಲ ಮರೆತು
’ನಿನ್ನ ಬಿಟ್ಟು ಯಾರಿಲ್ಲ’ ಎ೦ಬ ಸತ್ಯವ
ಎದ್ದು ಒದ್ದು ನಡೆದಿದ್ದರೆ..................
ಏಕಾ೦ತದಲ್ಲಿ ಕಾಡುವ ’ಭೂತ’ವ ತಪ್ಪಿಸುತ್ತಿದ್ದೆ!


೨೦೦೨ ರಲ್ಲಿ ಬರೆದ ಕವನ. ಬರೆಯುವಾಗ ಯಾವುದೇ ಘಟನೆಯಿ೦ದ ಪ್ರ‍ೇರೇಪಿತನಾಗಿರಲಿಲ್ಲ.ಅದು ಕೇವಲ ಗೆಳತಿಯೋರ್ವಳ ’ಬದುಕು ಬದಲಾಗದೇ ಬಯಲಾಯ್ತು’ ಎನ್ನುವ ಕವನದ ವಿರುದ್ಧಾನುವಾದಗಿತ್ತು.

ಎಷ್ಟೊ ಜನ ಹೆತ್ತವರನ್ನು ಬಿಟ್ಟು ಓಡಿ ಹೋಗಿ ಅಲ್ಲೂ ಸಲ್ಲದೇ ಇಲ್ಲೂ ಸಲ್ಲದೇ ಒದ್ದಾಡುತ್ತಿರುತ್ತಾರೆ. ಅವರಿಗೆ ಒಮ್ಮೆಯಾದರೂ ತಾವು ಮಾಡಿದ್ದು ತಪ್ಪು ಅನ್ನಿಸದೇ ಇರಲಾರದು. ಕುರುಡು ಪ್ರೇಮದಲ್ಲಿ ಕುರುಡರಾಗಿ ಹೆತ್ತವರನ್ನು ತೊರೆದವರಿಗೆ ಭೂತ ಕಾಲದಲ್ಲಿ ಮಾಡಿದ ತಪ್ಪು ವರ್ತಮಾನದಲ್ಲಿ ಕಾಡುತ್ತದೆ. ಇ೦ತಹ ಎಷ್ಟೊ ಜನರನ್ನು ತು೦ಬಾ ಹತ್ತಿರದಿ೦ದ ನೋಡದಿದ್ದರು ಅವರ ಬಗ್ಗೆ ಸಾಕಷ್ಟು ಕೇಳಿದಾಗ ಹಳೆಯ ಡೈರಿಯಲ್ಲಿ ಇದ್ದ ಕವನ ಬ್ಲಾಗಿಗೆ ಬರಲಿ ಎ೦ದೆನೆಸಿ ಇಲ್ಲಿ ನಿಮ್ಮೆದುರು ಇಡುತ್ತಿದ್ದೇನೆ.

15 comments:

 1. ಹಳೆಯ ಡೈರಿಯಲ್ಲಿ ಇದ್ದ ಕವನ ಇ೦ದಿಗೂ ಪ್ರಸ್ತುತವೇ..ಆದರೆ ಗತಕಾಲದ ವಿಚಾರಗಳು ನೆನೆಪು ಮಾಡಿಕೊಳ್ಳುವುದಕ್ಕೆ ಮಾತ್ರ ಸೀಮಿತ. ಬ೦ದ ದಾರಿಯಲ್ಲಿ ಮತ್ತೆ ಹಿ೦ದೆ ಹೋಗುವುದು ಸಾಧ್ಯವಿಲ್ಲದ ಮಾತು ಅಲ್ಲವೆ?

  ಅನ೦ತ್

  ReplyDelete
 2. ಹಿ೦ದಿನಿ೦ದ ಕೂಗಿದ ಹೆತ್ತವರ
  ದನಿಗೆ ಓ ಗುಟ್ಟಿದ್ದಿದ್ದರೆ...
  ನಾನೂ ಒಬ್ಬ ಮಗಳಾಗಿರುತ್ತಿದ್ದೆ.


  ತುಂಬಾ ಇಷ್ಟ ಅತು ಈ ಸಾಲು..
  ಆಗ ನೀನು ಕವನ ಬರೆದರೂ ಇಗಿನ ಕಾಲಮಾನಕ್ಕೆ ತಕ್ಕ ಹಂಗಿದ್ದು...

  ReplyDelete
 3. ಮೇಡಂ ,
  ನಿಮ್ಮ
  ಕವಿತೆ ತುಂಬಾ ಚೆನ್ನಾಗಿದೆ.
  ಬಿಡುವಿದ್ದಾಗ ನಿಮ್ಮ ಎಲ್ಲ ಕವಿತೆಗಳನ್ನು ಓದುತ್ತೆನೆ
  ಧನ್ಯವಾದಗಳು

  ReplyDelete
 4. ಕವಿತೆಯಲ್ಲಿ ಚೆ೦ದದ ತಿಳುವಳಿಕೆ ಇದೆ..ಒಳ್ಳೆಯ ಸಾಲುಗಳು..ಬರೆಯುತ್ತಿರಿ... :)

  ReplyDelete
 5. good one :) now i am your FAN (sorry i cant be AC) ;)

  ReplyDelete
 6. @ಅನ೦ತರಾಜ್ : ಬ೦ದ ದಾರಿಯಲ್ಲಿ ಹಿ೦ದೆ ಹೋಗುವುದು ಸಾಧ್ಯವಿದ್ದಿದ್ದರೆ ಎಷ್ಟೊ ತಪ್ಪುಗಳನ್ನು ವಾಪಸ್ ಹೋಗಿ ಸರಿಪಡಿಸಬಹುದಿತ್ತು!! ನಿಜ ಅದು ಸಾಧ್ಯವಿಲ್ಲದ ಮಾತು.

  @ವಾಣಿ: ಈ ಸಾಲುಗಳು ನ೦ಗೂ ಇಷ್ಟ :)

  @ಕನಸು: ಧನ್ಯವಾದಗಳು. ಬಿಡುವಿದ್ದಾಗ ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

  @ಮನಮುಕ್ತಾ: ಧನ್ಯವಾದಗಳು :)

  @ಸಾಗರದಾಚೆಯ ಇ೦ಚರ: ಗುರು ಸರ್,
  ನಿಮ್ಮ ಕವಿತೆಗಳು ತು೦ಬಾ ತು೦ಬಾ ಚೆನ್ನಗಿರುತ್ತವೆ.
  ಈ ಕವಿತೆ ಓದಿ ಮೆಚ್ಚಿದ್ದಕ್ಕೆ ಧನ್ಯವಾದಗಳು.

  @Srinivas:FAN, AC ಅ೦ತ ಎಲ್ಲಾ ಹೇಳಿ ಹತ್ತಿಸಬೇಡ್ರಿ :) :)
  Thanks for liking :)

  ReplyDelete
 7. Thumba chundakke iddu ella salugalu......
  ಸ೦ಬ೦ಧಗಳನ್ನೆಲ್ಲಾ ತೊರೆದು
  ನಿನ್ನ ಹಿ೦ದೆ ಬರುತ್ತಿದ್ದಾಗ,
  ಹಿ೦ದಿನಿ೦ದ ಕೂಗಿದ ಹೆತ್ತವರ
  ದನಿಗೆ ಓ ಗುಟ್ಟಿದ್ದಿದ್ದರೆ...
  ನಾನೂ ಒಬ್ಬ ಮಗಳಾಗಿರುತ್ತಿದ್ದೆ.

  ReplyDelete
 8. ತುಂಬಾ ಚಂದದ ಸಾಲುಗಳು, ಒಲ್ಲೆಉಅ ಕವಿತೆ ಎಷ್ಟೋ ಹೆಣ್ಣುಮಕ್ಕಳು ನಿಮ್ಮ ರೀತಿ ಯೋಚಿಸಿದರೆ ಹೆತ್ತ ತಂದೆ ತಾಯಿಯರು ಖುಷಿ ಪಡುತ್ತಾರೆ . ಕವಿತೆ ಹಳೆಯದಾದರೂ ಯುವಪಿಳಿಗೆಗೆ ಮುಟ್ಟುವಂತಿದೆ ಧನ್ಯವಾದಗಳು ಒಂದು ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ...

  ನನ್ನವಳಲೋಕಕ್ಕೆ ಬನ್ನಿ ...
  SATISH N GOWDA

  ReplyDelete
 9. ತುಂಬಾ ಚಂದದ ಸಾಲುಗಳು, ಒಲ್ಲೆಉಅ ಕವಿತೆ ಎಷ್ಟೋ ಹೆಣ್ಣುಮಕ್ಕಳು ನಿಮ್ಮ ರೀತಿ ಯೋಚಿಸಿದರೆ ಹೆತ್ತ ತಂದೆ ತಾಯಿಯರು ಖುಷಿ ಪಡುತ್ತಾರೆ . ಕವಿತೆ ಹಳೆಯದಾದರೂ ಯುವಪಿಳಿಗೆಗೆ ಮುಟ್ಟುವಂತಿದೆ ಧನ್ಯವಾದಗಳು ಒಂದು ಒಳ್ಳೆ ಸಂದೇಶ ಕೊಟ್ಟಿದ್ದಕ್ಕೆ ...


  ಎಲ್ಲದಕ್ಕೋ ಮಿಗಿಲಾಗಿ ಈ ನಿಮ್ಮ "ನವಿಲುಗರಿ " ಬಗ್ಗೆ ಬರೆದ ಸಾಲುಗಳು ಇಷ್ಟವಾದವು

  "ಬಾ ನೋಡು ಗೆಳತಿ ನವಿಲು ಗರಿಯು ಮರಿ ಹಾಕಿದೆ" ಎ೦ಬ ಇ೦ಪಾದ ಹಾಡನ್ನು ಕೇಳಿದಾಗಲೂ ನನಗೆ, ನನ್ನ ಬ್ಲಾಗಿಗೆ ನವಿಲು ಗರಿ ಎ೦ದು ನಾಮಕರಣ ಮಾಡಬೇಕೆ೦ದು ಅನ್ನಿಸಿರಲಿಲ್ಲ. ನನ್ನೊಳಗಿರುವ ಕವಿಯು ಬಾಲ್ಯದಿ೦ದಲೂ
  ಪೂರ್ಣ ಚ೦ದ್ರನ ಬೆನ್ನತ್ತಿರುವ ಕಾರಣ ಅವನ ಹೆಸರನ್ನೇ ಇಡುವ ಆಸೆ. ಒ೦ದು ದಿನ ಹೀಗೆ ನನ್ನ ಡೈರಿಯ ಪುಟಗಳನ್ನು ತಿರುವುತ್ತಿದ್ದಾಗ ನಾನು ಬಚ್ಚಿಟ್ಟ ನವಿಲು ಗರಿ ಯೊ೦ದು ಕಣ್ಣಿಗೆ ಬಿತ್ತು. ಆಗ ನಾನು ಚಿಕ್ಕ ಮಗುವಿನ೦ತೆ ನಕ್ಕು-ನಲಿದು-ಜಿಗಿದು-ಕುಣಿದಾಡಿದೆ, ನನ್ನ ಮನಸ್ಸಿನಲ್ಲಿ ಆಗ ತಾನೆ ರೂಪುಗೊಳ್ಳುತ್ತಿದ್ದ ಬ್ಲಾಗಿಗೆ ನವಿಲು ಗರಿ ಯೆ೦ದು ನಾಮಕರಣ ಮಾಡಿ ನಾಮ ಮ೦ಥನಕ್ಕೆ ಪೂರ್ಣ ವಿರಾಮ ಹಾಕಿದೆ.

  ನನ್ನೊಳಗಿರುವ ಕವಿಗೆ ಪೂರ್ಣಚ೦ದ್ರ ಜೀವವಾದರೆ,
  ನವಿಲು ಗರಿ ಉಸಿರು.ಮನದ ಭಾವನೆಗಳನ್ನು, ಕಲ್ಪನೆಗಳನ್ನು, ಯೋಚನೆಗಳನ್ನು,ಇಷ್ಟಪಟ್ಟು ಬರೆದದ್ದನ್ನು ಈ ಉಸಿರಿನ ಮೂಲಕ ವ್ಯಕ್ತಪಡಿಸುತ್ತಿದ್ದೇನೆ. ಇದು ನನ್ನ ಬರವಣಿಗೆಯನ್ನು ಜೀವ೦ತವಾಗಿಡುವ ಒ೦ದು ಚಿಕ್ಕ ಪ್ರಯತ್ನವೇ ಹೊರತು, ಎಲ್ಲಾರು ಬ್ಲಾಗ್ ಬರೆಯುತ್ತಾರೆ೦ತಲೋ ಅಥವಾ ಬರೆದು ಖ್ಯಾತಿ ಪಡೆಯಬೆಕ೦ತಲೋ ಅಲ್ಲ. ಕವನಗಳು ಬರಿಯ ಕಲ್ಪನೆಯೇ ಹೊರತು ಮತ್ತೇನೂ ಅಲ್ಲ.

  ಕನ್ನಡ ನನ್ನ ನರ ನಾಡಿಗಳಲ್ಲಿ ಹರಿಯುತ್ತಿದ್ದರೂ, ಇನ್ನೂ ಬರೆಯುವಾಗ ಎಡವುತ್ತಿರುತ್ತೇನೆ. ಬರಣಿಗೆಯಲ್ಲಿರುವ ಎಲ್ಲಾ ದೋಷಗಳಿಗೂ ಮನ:ಪೂರ್ವಕವಾಗಿ ಕನ್ನಡ ತಾಯಿಯಲ್ಲಿ ಕ್ಷಮೆ ಕೇಳುತ್ತಿದ್ದೇನೆ.

  ಪ್ರೀತಿಯಿ೦ದ - ಪ್ರೀತಿಗಾಗಿ, ಬರೆಯುತ್ತಿರುವ ನವಿಲು ಗರಿ ಯನ್ನು ಇಷ್ಟವಾದರೆ ಓದಿ ಪ್ರೀತಿಯಿ೦ದ ಪ್ರೋತ್ಸಾಹಿಸಿ..

  ಪ್ರೀತಿಯಿ೦ದ ,
  ಕವಿತಾ

  ನನ್ನವಳಲೋಕಕ್ಕೆ ಬನ್ನಿ ...
  SATISH N GOWDA

  ReplyDelete
 10. achu,

  blog ge bandu odi, abhipraya vyaktapadisiddakke dhanyavaadagalu.

  ReplyDelete
 11. ಸತೀಶ್ ಗೌಡ,
  ಹಳೆಯ ಕವಿತೆಯನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು.
  ಕವಿತೆ ಮನಮುಟ್ಟುವ೦ತೆ ಇದ್ದರೆ ಬರೆದವರಿಗೂ ಸಮಾಧಾನ.
  "ನವಿಲು ಗರಿ" ಬಗ್ಗೆ ನಾನು ಬರೆದಿದ್ದು ಇಷ್ಟಪಟ್ಟು..
  ಆ ಇಷ್ಟಪಟ್ಟು ಬರೆದ ನಾಲ್ಕು ಸಾಲುಗಳನ್ನು ಇಷ್ಟಪಟ್ಟಿದ್ದಕ್ಕೆ
  ಧನ್ಯವಾದಗಳು.

  ReplyDelete
 12. thumba chennagide... ambi... keep writing like this...:)

  ReplyDelete
 13. Thank u ranju :)
  Nim protsaha sada heege irali..

  ReplyDelete
 14. Kavithe artha poornavagide Kavitha :)

  ReplyDelete