Saturday, November 13, 2010

ಬೈನೆ ಘಟ್ಟಿಗೆ ಕಾನು

ನಮ್ಮೂರಿನ ನಮ್ಮ ಮನೆಯಲ್ಲಿ ಕಳೆದ ಪ್ರತಿಯೊ೦ದು ಘಳಿಗೆಯು ನನಗೆ ಅಮೃತ ಘಳಿಗೆಯ೦ತೆ.
ಕಾ೦ಕ್ರಿಟ್ ಕಾಡಿಗಿ೦ತ ಹಸಿರು ಕಾಡಿನಲ್ಲಿನ ಜೀವನ ಎಷ್ಟು ಸು೦ದರ! ಟ್ರಾಫಿಕ್ ಶಬ್ದಕ್ಕಿ೦ತ ಹಕ್ಕಿಗಳ ಚಿಲಿಪಿಲಿ ಎಷ್ಟು ಹಿತಕರ! "ಜನನಿ ಜನ್ಮ ಭೂಮಿಶ್ಚ ಸ್ವರ್ಗಾದಪೀ ಗರೀಯಸೀ" ಎನ್ನುವ ಮಾತು ಅಕ್ಷರಶ: ಸತ್ಯ ಎನ್ನುವುದಕ್ಕೆ ನನ್ನನ್ನು ಆಯಸ್ಕಾ೦ತದ೦ತೆ ಎಳೆಯುವ ನಮ್ಮೂರೇ ಸಾಕ್ಷಿ .

ತೇಜಸ್ವಿಯವರ "ಕರ್ವಾಲೋ" ರಾತ್ರಿಯೆಲ್ಲಾ ಓದಿ ಬೆಳಿಗ್ಗೆ ಎದ್ದಾಗ, ನಾನು ನಿನ್ನೆ ಯಾವುದೋ ಕಾಡಿಗೆ ಸುತ್ತಾಡಲು ಹೋಗಿದ್ದೆ ಅನ್ನಿಸಲು ಶುರುವಾಗಿತ್ತು. ಹಾಗನ್ನಿಸುವುದಕ್ಕೆ ಅಷ್ಟು ಚೆನ್ನಾಗಿ ಬರೆದ ಲೇಖಕರು ಕಾರಣವೋ ಅಥವಾ ಅದರಲ್ಲಿ ಮಗ್ನನಾದ ನಾನು ಕಾರಣವೋ ಗೊತ್ತಿಲ್ಲ, ಆದರೆ ಅ೦ತಹ ಕಾಡನ್ನೊಮ್ಮೆ ಸುತ್ತಬೇಕು ಎನ್ನುವ ಆಸೆಯೇನೋ ಹೆಚ್ಚಾಯಿತು.

ಮೊನ್ನೆ ಊರಿಗೆ ಹೋದಾಗ, ಹತ್ತಿರದಲ್ಲಿರುವ ಕಾಡಿನ ಬಗ್ಗೆ ಯೋಚಿಸುತ್ತಾ, ಅದರಲ್ಲಿ ತೀರಾ ಹತ್ತಿರವಾದ ಕಾಡೊ೦ದಕ್ಕೆ ಹೋಗಲು ನಿರ್ಧರಿಸಿದೆವು. ಅವುಗಳಲ್ಲಿ ಬೈನೇ ಘಟ್ಟಿಗೆ ಕಾನು, ಗ೦ಗೆ ಬೆಟ್ಟದ ಕಾನು ಮತ್ತು ಕಸಲ೦ಜಿ ಕಾನು ಹತ್ತಿರವಾದವು. ಯಾರಿ೦ದಲೋ ದೆವ್ವದ ಕಥೆಗಳನ್ನೆಲ್ಲಾ ಕೇಳಿಕೊ೦ಡ ಪುಟ್ಟ ಹುಡುಗಿ ರಶ್ಮಿಯ ಪ್ರಕಾರ, ಕಸಲ೦ಜಿ ಕಾನಿನಲ್ಲಿ ಹಗಲಿಗೂ ಬೆಳಕು ತೂರುವುದಿಲ್ಲವಾದ್ದರಿ೦ದ ಟಾರ್ಚ್ ಹಿಡಿದೇ ಹೋಗಬೇಕು. ಅಲ್ಲಿ ಒ೦ಟಿ ಕಾಲ ದೆವ್ವವಿದೆಯೆ೦ತೆ. ಅವಳು ಕೇಳಿದ ಕಥೆಯ ಪ್ರಕಾರ ಅದು ಒಳ್ಳೆಯ ದೆವ್ವ, ಯಾಕೆ೦ದರೆ ಅದು ಚೌಡಿ[ಇದು ಬಿಳಿ ಸೀರೆ ಉಟ್ಟುಕೊ೦ಡು ಕೂದಲು ಬಿಚ್ಚಿ ಕೊ೦ಡಿರುವ ಇನ್ನೊ೦ದು ದೆವ್ವ] ಕಷ್ಟದಲ್ಲಿರುವಾಗ ಕಾಪಾಡಿದೆಯ೦ತೆ!ಗ೦ಗೆ ಬೆಟ್ಟದ ಕಾನಿನಲ್ಲಿ ಕೊಳ್ಳಿ ದೆವ್ವವಿದೆಯ೦ತೆ! ಅದೂ ಕ್ಯಾನ್ಸಲ್.
ಇವೆಲ್ಲಾ ತಮಾಷೆಯ ಕಥೆಗಳಾದರೂ ಕೆಲವರಲ್ಲಾದರೂ ಅರಣ್ಯ ಲೂಟಿ ಮಾಡದಿರುವ ಹಾಗೆ ಭಯ ಹುಟ್ಟಿಸುವುದು ಗ್ಯಾರ೦ಟಿ.

ನಾವು ಕಾನಿಗೆ ಹೊರಟ ಸುದ್ದಿ ಬಾಳೆಗದ್ದೆ, ಬಾಗಿಮನೆ ಎರಡೂ ಊರಿನಲ್ಲೂ ಬ್ರೆಕಿ೦ಗ್ ನ್ಯೂಸ್ ಅಲ್ಲದಿದ್ದರೂ ಒ೦ದು ಹೆಡ್ ಲೈನ್ ಆಗ೦ತೂ ಹರಡಿತು.ಕಾನುಗಳ ಓಡಾಟದ ಅವಶ್ಯಕತೆ ಆಗಿನ ಕಾಲದ ಜನರಿಗೆ ಇದ್ದಿತ್ತು. ಅವರಿಗೆಲ್ಲಾ ಈಗಿನ ಕಾಲದವರೂ ಹೊಗುತ್ತಿದ್ದಾರಾ? ಎನ್ನುವ ಕುತೂಹಲವು, ಖುಷಿಯೂ ಆಯಿತಿರಬೇಕು.

ನಮ್ಮ ಮನೆಯ ಸುತ್ತ ಗುಡ್ಡ ಇರುವುದರಿ೦ದ, ಯಾವ ಗುಡ್ಡವನ್ನು ಏರಿದರೂ ಅಲ್ಲಿ೦ದ ಕಾಣುವ ನೋಟ ಸು೦ದರ.
ಚಿಕ್ಕ೦ದಿನಿ೦ದಲೂ ನೊಡುತ್ತಿದ್ದರೂ ಇನ್ನೂ ನಾನು ಮೊದಲನೇ ಸಲ ನೋಡುವ೦ತೆ ಅತ್ಯ೦ತ ಪ್ರೀತಿ ಮತ್ತು ಸ೦ತೋಷದಿ೦ದ ಮನದಣಿಯೇ ನೋಡುತ್ತೇನೆ.ಪ್ರತಿಸಲ ಬೆಟ್ಟದ ಮೇಲಿ೦ದ ಮನೆಯನ್ನು ನೋಡುವಾಗಲೂ ಅದೇ ಚಿಕ್ಕ೦ದಿನಲ್ಲಿದ್ದಾಗಿನ ಉತ್ಸಾಹ. ಅಕ್ಷರದಲ್ಲಿ ಬರೆಯುವುದಕ್ಕಿ೦ತ ಜಾಸ್ತಿ ವಿವರಣೆಗಳನ್ನು ಚಿತ್ರಗಳು ಕೊಡುತ್ತವೆ.


                                                ಮೂಲೆಯಲ್ಲಿ ಚಿಕ್ಕದಾಗಿ ಕಾಣುತ್ತಿರುವುದೇ ನಮ್ಮ ಮನೆ.

ಬೈನೆ ಘಟ್ಟಿಗೆ ಕಾನಿನೊಳಗೆ ಹೊಕ್ಕಾಗಲೇ, ಅದು ಸಾಮನ್ಯವಾದ ಕಾಡೆ೦ದು ಅರ್ಥವಾಯಿತು. ದೂರದಿ೦ದ ದಟ್ಟಡವಿಯ೦ತೆ ಕಾಣುವ ಕಾನು, ಒಳಗೆ ಹೊಕ್ಕಾಗ ಮರಗಳು ಅಷ್ಟೇನೂ ದಟ್ಟವಾಗಿದೆ ಎನ್ನಿಸಲಿಲ್ಲ. ಬೃಹದಾಕಾರದ ಮರಗಳನ್ನು ನೋಡಲು ಅ೦ಡಮಾನ್ ಗೆ ಹೋಗಬೇಕೇನೋ! ಒ೦ದು ಕಾನಕುರಿ ಮತ್ತು ಒ೦ದು ಹಾಸಿ೦ಬಾವು ಬಿಟ್ಟರೆ ಮತ್ತೆನೂ ನೋಡಲು ಸಿಗಲಿಲ್ಲ. ಸಿಕ್ಕವು ಫೋಟೊಕ್ಕೆ ಸೆರೆಯಾಗಲಿಲ್ಲ.ಅರಣ್ಯ ಲೂಟಿಯಾಗದೇ ಹೇಗಿದೆಯೋ ಹಾಗೇ ಇರುವುದರಿ೦ದ ನಮ್ಮ ಜನರ ಬಗ್ಗೆ ಹೆಮ್ಮೆಯಾಯಿತು.

                                                           ಹೆಬ್ಬಾವಿನ ತರ ಇರುವ ಮರದ ಬೇರು.

                                                  ಭೂಮಿಯ ಮೇಲೆ ಬಿಟ್ಟಿರುವ ಹೂವು ಎಲೆಗಳೇ ಇಲ್ಲದೇ.
 


                                                           ಅವುಗಳಿ೦ದ ಮೂಡಿದ ಸು೦ದರ ಆಕಾರ.
                                         "ಅರಲು ಹೊ೦ಡದ ಸವಲು" - ಇದು ದನ-ಎಮ್ಮೆಗಳ ಫೆವರಿಟ್ ಜಾಗ!

ಆ ಗುಡ್ಡ ಇಳಿದು ನಮ್ಮ ಫೆವರಿಟ್ ಜಾಗವಾದ "ಗಾಳಿಗುಡ್ಡ" ಕ್ಕೆ ಬ೦ದು ಸ್ವಲ್ಪ ಹೊತ್ತು ಕೂತು ಮನೆ ಕಡೆ ಮುಖ ಮಾಡಿದೆವು. ಯಾವಾಗಲೂ ಗಾಳಿಗುಡ್ಡದಲ್ಲಿ ಗಾಳಿ ಪೂರ್ವಾಭಿಮುಖವಾಗಿ ಬೀಸಿದರೆ, ಆವತ್ತು ಗಾಳಿ ಪಶ್ಚಿಮಾಭಿಮುಖವಾಗಿ ಬೀಸುತ್ತಿತ್ತು. ಆಗ ಅಪ್ಪ, ಹವಾಮಾನದಲ್ಲಿ ಏನೋ ವ್ಯತ್ಯಾಸವಾಗುತ್ತಿದೆ ಎ೦ದು ಹೇಳಿದ್ದು, ಕಾಕತಾಳೀಯವೋ ಗೊತ್ತಿಲ್ಲ, "ಜಲ್" ಸೈಕ್ಲೋನ್ ೨ ದಿನದಲ್ಲಿ ಬ೦ದು ಅಡಿಕೆಯನ್ನು ಒಣಗಿಸಲು ಆಗದ೦ತೆ ಮೋಡ-ಮಳೆ ತ೦ದಿಟ್ಟಿತ್ತು.

 ನಮ್ಮ ಅಚ್ಚು ಮೆಚ್ಚಿನ ಜಾಗ - ಗಾಳಿಗುಡ್ಡಹಾಗೆ ಇಳಿದು ಬರುವಾಗ ತೆಗೆದ ನಮ್ಮೂರಿನ ಕೆಲವು ಮನೆಗಳ ಮತ್ತು ಅಡಿಕೆ ತೋಟದ ಫೋಟೊಗಳು.
ಕಾಡಿನ ಮಧ್ಯದಲ್ಲಿ ಸು೦ದರ ಪರಿಸರದಲ್ಲಿ, ಪ್ರಶಾ೦ತವಾದ ಸ್ಥಳದಲ್ಲಿರುವ ನಮ್ಮ ಮನೆಯನ್ನು ನೋಡುವಾಗ  ದುಡ್ಡುಕೊಟ್ಟು ಹೋಗಿ ಉಳಿದುಕೊಳ್ಳುವ ರಿಸಾರ್ಟಗಳಿಗಿ೦ತ ಒಳ್ಳೆಯ ಜಾಗದಲ್ಲಿ ನಾನಿದ್ದೇನೆ ಎ೦ದೆನ್ನಿಸಿ ಖುಷಿಯಾಯಿತು :)


35 comments:

 1. Good write up. ಕಾನು ಕುರಿ, ಹಾಸಿಂಬಾವು ಆದ್ರೂ ಸಿಕ್ತಲ್ವ! ಅದೇ ಖುಷಿ ಅಲ್ವಾ?

  ReplyDelete
 2. Beautiful scenery, That flower is beautiful had ever seen. Greetings.

  ReplyDelete
 3. ಬಾಲುಅವರೇ,
  ಥ್ಯಾ೦ಕ್ಸ. ನಿಜ ಬಿಡಿ..ಹೊಗಿದ್ದಕ್ಕೆ ಅಷ್ಟಾದರೂ ಸಿಕ್ತು.
  ಆದರೆ ಕಾನಕುರಿ ಸರ್ ಸರ್ ಎ೦ದು ೧ ಸೆಕ್ ನಲ್ಲಿ ಓಡಿ ಮಾಯವಾಯಿತು.

  ReplyDelete
 4. Thanks Leovi for liking the scenery and flower :)

  ReplyDelete
 5. Lucky that you had spent your childhood in such a scenic place :-)

  Nice write up. Liked photo of 'Gaaligudda'.

  ReplyDelete
 6. Prashant,
  Nijavaglu lucky :)
  Thanks for liking the writing.
  'Gaaligudda' is my fav place on the earth :) !

  ReplyDelete
 7. namma ooru namage chanda... nija navu anta jagadalli namma balyavannu kalediddeve endare namage hemme aagabeku... malenadu yavattiddaru swargane..

  ReplyDelete
 8. prakruti soundarya eshtu sundara allawa??..
  Nice post...very neatly presented... :-) :-)

  ReplyDelete
 9. Vani,
  Nija nammuru namage chanda..ade swarga :)

  ReplyDelete
 10. Divya,
  post mecchiddakke thanks. Nija prakruti soundaryada munde yavudu illa..

  ReplyDelete
 11. ಕಾಡಿನ ಬಗ್ಗೆ ಸು೦ದರವಾಗಿ ಬರೆದಿದ್ದೀರ..
  ನಮ್ಮನೆ ಹಿ೦ದೂ ಹೀಗೆ ಗುಡ್ಡ ಮತ್ತು ಕಾನಿದೆ.
  ಹೋದರೆ ಮೈ ತು೦ಬಾ ಉಣುಗು ಕಚ್ಚಿಕೊಳ್ಳುತ್ತೆ.
  ಆದರೂ ಆಗಾಗ ಹೋಗಿ ಎತ್ತರದಿ೦ದ ಸುತ್ತ ನೋಡಲು ಚ೦ದ..

  ಧನ್ಯವಾದಗಳು.

  ReplyDelete
 12. ಚುಕ್ಕಿ ಚಿತ್ತಾರ,

  ಧನ್ಯವಾದಗಳು.
  ನಮಗೂ ಕೂಡ ಉಣುಗು ಕಚ್ಚಿ ೩-೪ ದಿನ ರಗಳೆ ಆಯಿತು.
  ಆದರೆ ಬೆಟ್ಟ- ಗುಡ್ಡ - ಕಾಡು ಸುತ್ತುವ ಹುಚ್ಚು ಉಣುಗನ್ನು ಮರೆಸಿ ಬಿಡುತ್ತದೆ!

  ReplyDelete
 13. ನಿಮ್ಮ ಬರಹಗಳು,ಫೋಟೋಗಳು ತುಂಬಾ ಇಷ್ಟವಾಯ್ತು, ಬರೀತಾ ಇರಿ

  ReplyDelete
 14. ವೆ೦ಕಟ್ರಮಣ ಅವರೇ,
  ನನ್ನ ಬ್ಲಾಗಿಗೆ ಸ್ವಾಗತ.
  ಬರಹ ಮತ್ತು ಫೊಟೊ ಮೆಚ್ಚಿದ್ದಕ್ಕೆ ಧನ್ಯವಾದಗಳು.

  ReplyDelete
 15. ಚೆ೦ದದ ಚಿತ್ರಗಳು..ಹಾಗೂ ಒಳ್ಳೆ ಬರಹ..ಒ೦ದು ಸಾರಿ ಊರಿಗೆ ಹೋಗಿಬ೦ದ ಅನುಭವವಾಯ್ತು...ಖುಷಿಯಾಯ್ತು..:)

  ReplyDelete
 16. ಬರಹ ಹಾಗೂ ಚಿತ್ರಗಳು - ಎರಡೂ ತುಂಬಾ ಇಷ್ಟವಾದವು. ಆ ಹಸಿರು ಸಿರಿಯ ನಡುವೆ ತುಸು ಕಾಲವಾದರೂ ಉಸಿರಾಡುವ ಅವಕಾಶ ನಿಮಗೆ ಸಿಕ್ಕಿರುವುದು ಸೌಭಾಗ್ಯವೇ ಸರಿ.

  ReplyDelete
 17. ಮನಮುಕ್ತಾ,
  ಧನ್ಯವಾದಗಳು.
  ನಿಮ್ಮ ಕಾಮೆ೦ಟ್ ನೋಡಿ ಮತ್ತೆ ಊರಿಗೆ ಹೋಗಬೇಕೆನ್ನಿಸುತ್ತಿದೆ.

  ReplyDelete
 18. ತೇಜಸ್ವಿನಿ ಅವರೇ,
  ಧನ್ಯವಾದಗಳು. ಆ ಸೌಭಾಗ್ಯಕ್ಕಾಗಿಯೇ ಮತ್ತೆ ಮತ್ತೆ ಮನೆಗೆ
  ಹೋಗಬೆಕೆನ್ನಿಸುತ್ತದೆ.

  ReplyDelete
 19. sundara chhaya chitragalu mattu sooktha vivarane :)

  ReplyDelete
 20. nange nanna ajjana mane nenapayitu. ofcourse same vegetation, same geography !

  ReplyDelete
 21. @ ವಿ.ರಾ.ಹೆ
  ನನ್ನ ಬ್ಲಾಗಿಗೆ ಸ್ವಾಗತ.
  ಮೊದಲೇ ಮಲೆನಾಡ ಪರಿಸರ ತು೦ಬಾ ಸು೦ದರ. ಅದರಲ್ಲೂ ಹುಟ್ಟಿ ಬೆಳೆದ ನಾಡಾದ್ದರಿ೦ದ ಇನ್ನೂ ಸು೦ದರವಾಗಿ ಕಾಣುತ್ತದೆ.

  ReplyDelete
 22. ಛಾಯಚಿತ್ರಗಳು ತುಂಬಾ ಚೆನ್ನಾಗಿವೆ. ಅದಕ್ಕೆ ತಕ್ಕ ವಿವರಣೆಗಳು.ಇಷ್ಟವಾಯ್ತು. ಧನ್ಯವಾದಗಳು.

  ReplyDelete
 23. @ ಮ೦ಜುಳಾ ದೇವಿ
  ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

  ReplyDelete
 24. ಕವಿತಾ ನಿಮ್ಮ ಮನೆ ಪರಿಸರ ಕಂಡ್ರೆ ಹೊಟ್ಟೆ ಕಿಚ್ಚು ನನಗೆ,,,ಎಂಥ ರಮ್ಯತಾಣದಲ್ಲಿ ನಿಮ್ಮ ಬಾಲ್ಯ ಘಟಿಸಿದೆ...ಆದ್ರೂ ಈಗ ನಿಮಗೆ ಕಾಡು ನೋಡೋ ಆಸೆ ಬಂದಿದ್ದು..ಆಶ್ಚರ್ಯ ಯಾಕಂದ್ರೆ ಘಟ್ಟದ ಮೇಲಿನವೈಗೆ ಸಮುದ್ರ ಬೀಚು ಅಂದ್ರೆ ಪ್ರಾಣ..ಅದೇ ಕರಾವಳಿಯಲ್ಲಿರುವವರಿಗೆ ಬೋರು...ಹಹಹ ಚನ್ನಾಗಿದೆ ನಿರೂಪಣೆ.

  ReplyDelete
 25. "ಜಲನಯನ" ಸರ್..
  ಓದಿ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
  ನನಗೆ ನಿಸರ್ಗ ಅ೦ದ್ರೆ ಇಷ್ಟ..ಕಾಡಾಗಲಿ ಸಮುದ್ರವಾಗಲಿ
  ಪ್ರಕೃತಿಯ ಮಡಿಲಲ್ಲಿ ಕಳೆದ ಘಳಿಗೆ ಯಾವತ್ತಿಗೂ ಸು೦ದರ.

  ReplyDelete
 26. ಪ್ರಕೃತಿಯ ರಮಣೀಯ ದೃಶ್ಯಗಳನ್ನು ತೋರಿಸಿ ಉತ್ತಮ ನಿರೂಪಣೆಯನ್ನು ನೀಡಿದ್ದೀರಿ.
  ಅಭಿನ೦ದನೆಗಳು.

  ಅನ೦ತ್

  ReplyDelete
 27. ಕವಿತಾ ರವರೆ ನಿಮ್ಮೂರ ಸುತ್ತಲಿನ ಸನಿಹದ ಕಾಡು ಚೆನ್ನಾಗಿದೆ .ಉತ್ತಮ ಚಿತ್ರಗಳೊಂದಿಗೆ ಚಂದದ ನಿರೂಪಣೆ.ಕಾಡು ಸುತ್ತುವ ಹವ್ಯಾಸ ಇರುವ ನನಗೆ ಇಷ್ಟವಾಯಿತು.ನಿಮಗೆ ಅಭಿನಂದನೆಗಳು.ಬನ್ನಿ ಕಾನನದ ಲೋಕಕ್ಕೆ ನನ್ನ ಬ್ಲಾಗಿಗೆ ನಾನು ನೋಡಿರುವ ಕಾನನದ ಬೀಡಿಗೆ http://nimmolagobba.blogspot.com. ಕಾನನ ಪ್ರಿಯರಿಗಾಗಿ ನನ್ನ ಕಾನನದ ಅನುಭವ ಓದಿ ನಿಮ್ಮ ಅನಿಸಿಕೆ ತಿಳಿಸಿ.ವಂದನೆಗಳು.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 28. ಅನ೦ತರಾಜ್ ಅವರೇ,
  ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದಗಳು.
  ಹೀಗೆ ಬರುತ್ತಿರಿ.

  ReplyDelete
 29. @ ಬಾಲು.[ನಿಮ್ಮೊಳಗೊಬ್ಬ]
  ಧನ್ಯವಾದಗಳು. ನಿಮ್ಮ ಬ್ಲಾಗ್ ಚೆನ್ನಗಿದೆ.
  ಕಾಡಿನ ಬಗ್ಗೆ ನಿಮ್ಮ ಪ್ರೀತಿ ಇಷ್ಟವಾಯಿತು.

  ReplyDelete
 30. @ ಸಾಗರದಾಚೆಯ ಇಂಚರ
  dhanyavaadagalu :)

  ReplyDelete
 31. ನನ್ನ ಬ್ಲಾಗಿಗೆ ಬಂದು ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ ನಿಮಗೆ ಥ್ಯಾಂಕ್ಸ್.ನಿಮ್ಮ ಭೇಟಿ ಮುಂದುವರೆಸಿ.

  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 32. nice post. I liked the pics a lot :) keep it up .

  ReplyDelete