Monday, October 11, 2010

ಬದುಕು ಅಳಿಯುವ ಮುನ್ನ...

ಮೂರು ದಿನಗಳ ಈ ಜೀವನದಲ್ಲಿ ನಮ್ಮ ಆಸೆ, ಆಕಾ೦ಕ್ಷೆಗಳು ನಾಳೆಗಾಗಿ ಏಕೆ ಕಾಯಬೇಕು?
ನಮ್ಮ-ನಿಮ್ಮ ಕನಸುಗಳಿಗೆ ರೂಪ ಕೊಡುವ ಪ್ರಯತ್ನ ಇ೦ದಿನಿ೦ದಲೇ ಪ್ರಾರ೦ಭವಾಗಲಿ ಎನ್ನುವುದು ಕವನದ ಆಶಯ..


ನಾಳೆಗಾಗಿ ಕಾದು ಕುಳಿತ
ಸುಪ್ತ ಮನದ ಆಸೆಗಳೇ,
ಹಾರಿರಿ ಗರಿ ಬಿಚ್ಚಿ
ರೆಕ್ಕೆಗೆ ಬಣ್ಣ ಬಳಿದು;
ಪರಿತಪಿಸದಿರಲಿ ನಾಳೆಗಳು
ಕಳೆದ ನಿನ್ನೆಯ ಬಗ್ಗೆ
ಆಲಸ್ಯದಿ೦ದ ಬಚ್ಚಿಟ್ಟ
ಕನಸುಗಳು ಅಳಿದು. 

11 comments:

  1. ಖಂಡಿತ,
    ಆಸೆಗಳಿಗೆ
    ಕನಸುಗಳಿಗೆ
    ಹಾರಾಡಲು ಈ ಕ್ಷಣವೇ ಸುಸಮಯ . . . .
    well said, madam.

    ReplyDelete
  2. Nimmee lekhana nodidaaga nenapaagiddu andre..

    "Look to this day as it is the very essence of life! Yesterday is but a dream, and tomorrow is just a vision. But today, well-lived, makes every yesterday a dream of happiness, and every tomorrow a vision of hope."

    Yenthaha satya alwa? In fact I have taken a printout of this quote and pasted it in my workplace!

    Nimma barahakke abhinandanegalu..

    ReplyDelete
  3. ನಾಳೆಗಾಗಿ ಕಾಯುವುದರಲ್ಲಿ ಅರ್ಥವಿಲ್ಲ
    ಅರ್ಥ ಪೂರ್ಣ ಕವನ ಚನ್ನಾಗಿದೆ
    ಶುಭವಾಗಲಿ

    ReplyDelete
  4. ತೇಜಸ್ವಿನಿ ಅವರೇ , ಧನ್ಯವಾದಗಳು.

    ReplyDelete
  5. ಶರಶ್ಚ೦ದ್ರ ಅವರೇ ,
    ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು.

    ReplyDelete
  6. ಚೆಂದದ ಕವನ
    ನಾಳೆಗಾಗಿ ಕಾಡು ಕುಳಿತು ಇಂದಿನ ಬದುಕನ್ನೇ ನಾವು ಹಾಲು ಮಾಡಿಕೊಳ್ಳುತ್ತಿದ್ದೇವೆ

    ನಾಳೆ ಚೆನ್ನಾಗಿ ಬದುಕಬೇಕು ಎಂದು ಇಂದು ದುಡಿಯುತ್ತೇವೆ. ಆ ನಾಳೆ ಬಂದಾಗ ಪುನಃ ಮತ್ತೊಂದು ನಾಳೆಯ ನಿರೀಕ್ಷೆ

    ಬದುಕು ಮತ್ತೆ ನಾಳೆಯೇ ಆಗಿಬಿಡುತ್ತದೆ

    ReplyDelete
  7. ಗುರು ಅವರೇ,
    ಧನ್ಯವಾದಗಳು.
    ನಾಳೆಯ ಬಗ್ಗೆ ಚೆನ್ನಾಗಿ ಹೇಳಿದ್ದೀರಿ.
    ನಾಳೆ ಎ೦ದವನ ಮನೆ ಹಾಳು ಎ೦ದು ಗೊತ್ತಿದ್ದೂ, ನಾಳೆಗಾಗಿ ಇ೦ದನ್ನು ಹಾಳು ಮಾಡಿಕೊಳ್ಳುತ್ತೇವೆ.ಎ೦ತಹ ವಿಪರ್ಯಾಸ!
    ನೀವು ಬ್ಲಾಗಿಗೆ ಭೇಟಿ ಕೊಟ್ಟಿದ್ದು ತು೦ಬಾ ಸ೦ತಸವಾಯಿತು :)

    ReplyDelete
  8. ಎಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು.
    ನೀವೆಲ್ಲ ಬ್ಲಾಗಿಗೆ ಬ೦ದು ಚ೦ದದ ಕಾಮೆ೦ಟ್ಸ್ ಕೊಟ್ಟಿದ್ದಕ್ಕೆ ಇನ್ನೂ ಹೆಚ್ಚು ಬರೆಯಲು ಹುಮ್ಮಸ್ಸು ಬ೦ದಿದೆ. ಖುಷಿ ಕೊಟ್ಟಿದೆ. ಹೀಗೆ ಬರುತ್ತಿರಿ.

    ReplyDelete