Saturday, August 28, 2010

ಬಾಳ ಚ೦ದ್ರಮ

೨೦೦೨ ರಲ್ಲಿ ಈ ಕವನವನ್ನು ಪ್ರಕಟಿಸಿದ ಪತ್ರಿಕೆ 'ಮಲ್ಲಿಗೆ' ಗೆ ಧನ್ಯವಾದಗಳು. 

ಹಗಲಿರುಳು ಆ ಚ೦ದ್ರಮನಿಗಾಗಿ
ಕಾಯುವ೦ತೆ ಚಕೋರಿ,
ತನ್ನ ಬಾಳ ಪೂರ್ಣಚ೦ದ್ರಮನಿಗಾಗಿ
ಕಾಯುತ್ತಾಳೆ ಹದಿನೆ೦ಟರ ಪೋರಿ.

ಯಾವ ದಿಕ್ಕಿನಿ೦ದ ಬರುತ್ತಾನೆ
ಬಿಳಿ ಕುದುರೆಯನೇರಿದ ರಾಜಕುಮಾರ
ಎ೦ದರಸುತ್ತಾ, ಬೆಳದಿ೦ಗಳಾ ಬೆಳಕಲ್ಲಿ ಕುಳಿತು
ಆತನಿಗಾಗಿ ಕಟ್ಟುತ್ತಾಳೆ ಕನಸಿನ ಹಾರ.

ಒ೦ದು ಶುಭದಿನ ಆಕೆಯ ಬಾಳಲ್ಲಿ
ಕಲ್ಪನೆಯ ಚ೦ದ್ರಮನ ಪ್ರವೇಶವಾದಾಗ,
ಕಣ್ಣ ತು೦ಬ ತು೦ಬಿಸಿಕೊಳ್ಳುತ್ತಾಳೆ
’ಅವಳು’, ಅ೦ತರಪಟ ಸರಿದಾಗ.

ಆತ ಹಾಕಿದ ಮೂರು ಗ೦ಟಿನಲ್ಲಿ
ಏನೇನೋ ಕನಸುಗಳನ್ನು ಕಟ್ಟಿಡುತ್ತಾಳೆ,
ಕಚಗುಳಿಯಿಡುವ ಅಕ್ಷತೆಯ ಮಳೆಯಲ್ಲಿ
ಬೆಳದಿ೦ಗಳ ಸುಖವನ್ನು ಅನುಭವಿಸುತ್ತಾಳೆ.

’ಅವಳ’ ಮತ್ತು ’ಅವನ’ ಬಗ್ಗೆ ಕಲ್ಪಿಸುತ್ತಾ,
ಹೋಲಿಸಿಕೊಳ್ಳುತ್ತಿದ್ದೇನೆ ನನ್ನನ್ನು ಅವಳ ಜೊತೆಗೆ.
ಆಶಿಸುತ್ತಿದ್ದೇನೆ ನನ್ನ ’ಅವನು’
ಪೂರ್ಣಚ೦ದ್ರನೇ ಆಗಿರಲಿ ನನ್ನ ಪಾಲಿಗೆ.

2 comments:

  1. Beautiful Ambi! ತುಂಬಾ ಚೆನ್ನಾಗಿದೆ..ತುಂಬಾ ಚೆನ್ನಾಗಿದೆ..ಬರೆಯೋದು ನಿಲ್ಲಿಸಬೇಡ

    ReplyDelete
  2. ಧನ್ಯವಾದಗಳು :)
    ತಮ್ಮ ಪ್ರೋತ್ಸಾಹ ಸದಾ ಹೀಗೇ ಇರಲಿ.. ಮು೦ದುವರೆಸುತ್ತೇನೆ.

    ReplyDelete